KPSC GROUP C Technical & Non Technical General Knowledge Paper-1 (Exam held on 22-09-2018) Questions with answers
KPSC GROUP C ಪತ್ರಿಕೆ -1 ಸಾಮಾನ್ಯ ಅಧ್ಯಯನ (Below Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 22-09-2018 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು
| 1. | ವರ್ಮಿ ಕಂಪೋಸ್ಟಿಂಗ್ (ಹುಳುಗೊಬ್ಬರ) ಇದಕ್ಕೆ ಸಂಬಂಧಿಸಿದ್ದು | |
| (1) | ಸಾವಯವ ತ್ಯಾಜ್ಯವನ್ನು ಕಪ್ಪು, ಮಣ್ಣಿನ ವಾಸನೆಯ, ಪೋಷಕ ಸಮೃದ್ಧ ಹ್ಯೂಮಸ್ ಆಗಿ ಎರೆ ಹುಳು ಮತ್ತು ಸೂಕ್ಷ್ಮ ಜೀವಿಗಳ ಬಳಕೆಯಿಂದ ಪರಿವರ್ತಿಸುವುದು | |
| (2) | ಎರೆ ಹುಳು ಸಾಕಣೆ | |
| (3) | ಎರೆ ಹುಳು ಬಳಕೆ ಮಾಡಿ ವರ್ಮಿಕಂಪೋಸ್ಟ್ ಕೃಷಿ ಮತ್ತು ಉತ್ಪಾದನೆ | |
| (4) | ಎರೆ ಹುಳು ಬಳಕೆ ಮಾಡಿ ಕಂಪೋಸ್ಟ್ ಉತ್ಪಾದನೆ | |
ಸರಿ ಉತ್ತರ
(1) ಸಾವಯವ ತ್ಯಾಜ್ಯವನ್ನು ಕಪ್ಪು, ಮಣ್ಣಿನ ವಾಸನೆಯ, ಪೋಷಕ ಸಮೃದ್ಧ ಹ್ಯೂಮಸ್ ಆಗಿ ಎರೆ ಹುಳು ಮತ್ತು ಸೂಕ್ಷ್ಮ ಜೀವಿಗಳ ಬಳಕೆಯಿಂದ ಪರಿವರ್ತಿಸುವುದು
| 2. | ಎಕಿಡ್ನಾ ಎಂಬುದು ಒಂದು | |
| (1) | ಮೊಟ್ಟೆಯನ್ನಿಡುವ ಸಸ್ತನಿ | |
| (2) | ಚೀಲವನ್ನು ಹೊಂದಿರುವ ಸಸ್ತನಿ | |
| (3) | ಕೀಟಭಕ್ಷಕ ಸಸ್ತನಿ | |
| (4) | ಹಾರುವ ಸಸ್ತನಿ | |
ಸರಿ ಉತ್ತರ
(1) ಮೊಟ್ಟೆಯನ್ನಿಡುವ ಸಸ್ತನಿ
| 3. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
| A. | ಕೇರಳದಲ್ಲಿ ಪೂರ್ವಕ್ಕೆ ಹರಿವ ನದಿಗಳಿಲ್ಲ. | |
| B. | ಮಧ್ಯ ಪ್ರದೇಶದಲ್ಲಿ ಪಶ್ಚಿಮಕ್ಕೆ ಹರಿವ ನದಿಗಳಿಲ್ಲ. | |
| ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ? | ||
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | ||
| (1) | A ಮಾತ್ರ | |
| (2) | B ಮಾತ್ರ | |
| (3) | A ಮತ್ತು B ಇವೆರಡೂ | |
| (4) | A ಆಗಲೀ ಅಥವಾ B ಆಗಲೀ ಅಲ್ಲ | |
ಸರಿ ಉತ್ತರ
(4) A ಆಗಲೀ ಅಥವಾ B ಆಗಲೀ ಅಲ್ಲ
| 4. | ಈ ಪೈಕಿ ಯಾವುದು ಸರಿಯಲ್ಲ ? | |
| (1) | ಸ್ಥಳದಲ್ಲಿ ತಂತಾನೇ ಬಂಡೆಗಳು ಶಿಥಿಲ ವಾಗುವುದಕ್ಕೆ ವೆದರಿಂಗ್ ಎನ್ನುವರು. | |
| (2) | ಏಕ ಕೇಂದ್ರಿತ ಹಾಳೆಗಳು, ಚಪ್ಪಡಿಗಳು, ಹಾಳೆಗಳು ಇಲ್ಲವೆ ಹಲ್ಲೆಗಳು ಅನುಕ್ರಮವಾಗಿ ಸಡಿಲಗೊಂಡು ಮುರಿದು ಬಂಡೆರಾಶಿಯಿಂದ ಕೊಚ್ಚಿ ಹೋದದ್ದನ್ನು ಪಟ್ಟೆಸೀಳುವಿಕೆ ಎನ್ನುತ್ತಾರೆ. | |
| (3) | ಯಾಂತ್ರಿಕ ವೆದರಿಂಗ್ ಮರು ಭೂಮಿಗೆ ಸೀಮಿತ ಗೊಂಡಿದೆ. | |
| (4) | ವೆದರಿಂಗ್ ಮೇಲೆ ಏಕೈಕವಾಗಿ ಮುಖ್ಯವಾಗಿ ಪ್ರಭಾವಬೀರುವುದೆಂದರೆ ವಾಯು ಗುಣ. | |
ಸರಿ ಉತ್ತರ
(3) ಯಾಂತ್ರಿಕ ವೆದರಿಂಗ್ ಮರು ಭೂಮಿಗೆ ಸೀಮಿತ ಗೊಂಡಿದೆ.
| 5. | ವಾಯುಸಾಗಣೆಯನ್ನು ಪ್ರಭಾವಿಸುವುದು | |
| A. | ವಾಯುವಿನ ಸ್ವಾತಂತ್ರ್ಯ | |
| B. | ಅ ಕ ವಾಯುಯಾನ ದರಗಳು | |
| C. | ವಾಯು ಟರ್ಮಿನಲ್ಗಳ (ನಿಲ್ದಾಣಗಳ) ಲಭ್ಯತೆ | |
| ಈ ಪೈಕಿ ಯಾವುದು / ವು ವಾಯು ಸಾಗಣೆ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವಂತಹವು ? | ||
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | ||
| (1) | A ಮಾತ್ರ | |
| (2) | A ಮತ್ತು B ಮಾತ್ರ | |
| (3) | A, B ಮತ್ತು C | |
| (4) | B ಮತ್ತು C ಮಾತ್ರ | |
ಸರಿ ಉತ್ತರ
(3) A, B ಮತ್ತು C
| 6. | ಪಟ್ಟಿ I (ಮ್ಯಾಂಗ್ರೋವ್ ಸ್ಥಳಗಳು) ಮತ್ತು ಪಟ್ಟಿ II (ರಾಜ್ಯ) ಗಳನ್ನು ಹೊಂದಿಸಿ : | |
| ಪಟ್ಟಿ I (ಮ್ಯಾಂಗ್ರೋವ್ ಸ್ಥಳ) | ಪಟ್ಟಿ II (ರಾಜ್ಯ) | |||
| A. | ಅಚ್ರಾ ರತ್ನಗಿರಿ | I. | ಕರ್ನಾಟಕ | |
| B. | ಕೂಂದಾಪುರ | II. | ಕೇರಳ | |
| C. | ಪಿಚಾವರಂ | III. | ಮಧ್ಯ ಪ್ರದೇಶ | |
| D. | ವೆಂಬನಾಡ್ | IV. | ಮಹಾರಾಷ್ಟ್ರ | |
| V. | ತಮಿಳು ನಾಡು | |||
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : | ||||
| A | B | C | D | ||
| (1) | II | I | V | IV | |
| (2) | IV | V | III | II | |
| (3) | II | V | III | IV | |
| (4) | IV | I | V | II |
ಸರಿ ಉತ್ತರ
(4) IV I V II
| 7. | ಈ ಕೆಳಗಿನ ರಾಜ್ಯಗಳ ವಿಸ್ತೀರ್ಣಕ್ಕನುಗುಣವಾದ ಸರಿಯಾದ ಇಳಿಕೆ ಅನುಕ್ರಮ ವೇನು ? | |
| A. | ಆಂಧ್ರ ಪ್ರದೇಶ | |
| B. | ಬಿಹಾರ | |
| C. | ಮಧ್ಯ ಪ್ರದೇಶ | |
| D. | ಉತ್ತರ ಪ್ರದೇಶ | |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | ||
| (1) | A, B, C, D | |
| (2) | B, C, D, A | |
| (3) | D, C, B, A | |
| (4) | C, D, A, B | |
ಸರಿ ಉತ್ತರ
(4) C, D, A, B
| 8. | ನಿತ್ಯ ಹರಿದ್ವರ್ಣ ಅರಣ್ಯವು ವರ್ಷವಿಡೀ ಸದಾ ಹಸಿರಾಗಿರಲು ಕಾರಣವೆಂದರೆ | |
| (1) | ಅದರ ಎಲೆಗಳು ಉದುರುತ್ತವೆ ಮತ್ತು ಒಂದು ದಿನದೊಳಗಾಗಿಯೇ ಅದು ಹೊಸ ಎಲೆಗಳನ್ನು ಪಡೆಯುತ್ತದೆ. | |
| (2) | ವರ್ಷದಾದ್ಯಂತವೆಲ್ಲ ತನ್ನ ಎಲೆಗಳನ್ನು ಉದುರಿಸಿಕೊಳ್ಳುವುದಿಲ್ಲ. | |
| (3) | ಅದು ಎಲೆಗಳನ್ನು ಉದುರಿಸಿ ಕೊಳ್ಳುತ್ತವೆ ಮತ್ತು ಮುಕ್ತವಾಗಿರುವಂತೆ ಕಾಣಿಸಿಕೊಳ್ಳುತ್ತದೆ ಅದರೆ ಅದನ್ನು ಸರಳವಾಗಿ ನಿತ್ಯ ಪರಿದ್ವರ್ಣವೆಂತಲೇ ಕರೆಯಲಾಗುತ್ತದೆ. | |
| (4) | ಅದು ವಿವಿಧ ಜಾತಿಪ್ರಭೇದಗಳನ್ನುಳ್ಳ ಒಂದು ದಟ್ಟ ಅರಣ್ಯವಾಗಿದೆ, ಬೇರೆ ಬೇರೆ ಕಾಲಾವಧಿಯಲ್ಲಿ ಪ್ರತಿಯೊಂದು ಜಾತಿ ಪ್ರಭೇದಗಳೂ ತಮ್ಮ ಎಲೆಗಳನ್ನು ಉದುರಿಸಿಕೊಳ್ಳುತ್ತವೆ. | |
ಸರಿ ಉತ್ತರ
(4) ಅದು ವಿವಿಧ ಜಾತಿಪ್ರಭೇದಗಳನ್ನುಳ್ಳ ಒಂದು ದಟ್ಟ ಅರಣ್ಯವಾಗಿದೆ, ಬೇರೆ ಬೇರೆ ಕಾಲಾವಧಿಯಲ್ಲಿ ಪ್ರತಿಯೊಂದು ಜಾತಿ ಪ್ರಭೇದಗಳೂ ತಮ್ಮ ಎಲೆಗಳನ್ನು ಉದುರಿಸಿಕೊಳ್ಳುತ್ತವೆ.
| 9. | ಬಹುತೇಕ ಒಂದು ಸಂಪೂರ್ಣ ವೃತ್ತದಲ್ಲಿ ತಿರುವನ್ನು ಹೊಂದಿದ ಹರಿದಾಡುವ ಒಂದು ನದಿಯಿಂದು ರೂಪಿತವಾದ ಒಂದು ಕೊಳವನ್ನು ಹೀಗೆನ್ನುತ್ತಾರೆ | |
| (1) | ಲೆವೀಸ್ (ನೈಸರ್ಗಿಕ ನೆರೆಯೊಡ್ಡು) | |
| (2) | (ನೊಗ) ನದಿ ಕಮಾನು ಕೊಳ | |
| (3) | ಫಲವತ್ತು ಪಂಕ | |
| (4) | ಫಲವತ್ತು ಸಮತಲ | |
ಸರಿ ಉತ್ತರ
(2) (ನೊಗ) ನದಿ ಕಮಾನು ಕೊಳ
| 10. | ಬೀಟಾಟ್ರಾನು ವೇಗವರ್ಧಕವಾಗಿದ್ದು ಇದರ ವೇಗವರ್ಧನೆಯನ್ನು ಮಾಡಲು ಬಳಸಲಾಗುತ್ತದೆ | |
| (1) | ಪ್ರೋಟಾನುಗಳು | |
| (2) | ನ್ಯೂಟ್ರಾನುಗಳು | |
| (3) | ಇಲೆಕ್ಟ್ರಾನುಗಳು | |
| (4) | ಯಾವುದೇ ವಿದ್ಯುದಾವಿಷ್ಟನ ಹೊಂದಿದ ಕಣಗಳು | |
ಸರಿ ಉತ್ತರ
(3) ಇಲೆಕ್ಟ್ರಾನುಗಳು
| 11. | ಗುಲ್ಮಾರ್ಗ್ ಎಂಬ ಗಿರಿ ಧಾಮವು ಈ ರಾಜ್ಯದಲ್ಲಿದೆ | |
| (1) | ಹಿಮಾಚಲ್ ಪ್ರದೇಶ | |
| (2) | ಜಮ್ಮು ಮತ್ತು ಕಾಶ್ಮೀರ್ | |
| (3) | ಮಹಾರಾಷ್ಟ್ರ | |
| (4) | ಮಿರೆರಾಂ | |
ಸರಿ ಉತ್ತರ
(2) ಜಮ್ಮು ಮತ್ತು ಕಾಶ್ಮೀರ್
| 12. | ಅಷ್ಟ ದಿಗ್ಗಜರೆಂಬ ಕವಿ ವಿದ್ವಾಂಸರಿಗೆ ಆಶ್ರಯ ನೀಡಿದ್ದ ವಿಜಯನಗರ ಸಾಮ್ರಾಜ್ಯದ ದೊರೆ | |
| (1) | I ನೇ ದೇವರಾಯ | |
| (2) | ಶ್ರೀ ಕೃಷ್ಣದೇವರಾಯ | |
| (3) | II ನೇ ದೇವರಾಯ | |
| (4) | ರಾಮರಾಯ | |
ಸರಿ ಉತ್ತರ
(2) ಶ್ರೀ ಕೃಷ್ಣದೇವರಾಯ
| 13. | ಕರ್ನಾಟಕವು ಏಕೀಕರಣವಾದ ವರ್ಷ ಯಾವುದು ಮತ್ತು ಅದರ ಪ್ರಥಮ ಮುಖ್ಯ ಮಂತ್ರಿ ಯಾರು? | |
| (1) | ನವೆಂಬರ 1, 1956, ಶ್ರೀ ಎಸ್. ನಿಜಲಿಂಗಪ್ಪ | |
| (2) | ನವೆಂಬರ 1, 1947, ಶ್ರೀ ಕೆ.ಸಿ. ರೆಡ್ಡಿ | |
| (3) | ನವೆಂಬರ 1, 1973, ಶ್ರೀ ದೇವರಾಜ ಅರಸು | |
| (4) | ನವೆಂಬರ 1, 1973, ಶ್ರೀ ಎಸ್. ನಿಜಲಿಂಗಪ್ಪ | |
ಸರಿ ಉತ್ತರ
(1) ನವೆಂಬರ 1, 1956, ಶ್ರೀ ಎಸ್. ನಿಜಲಿಂಗಪ್ಪ
| 14. | ಮದ್ಯಕಾಲೀನ ಭಾರತದದಲ್ಲಿ ಮಾರುಕಟ್ಟೆ ಸುಧಾರಣೆಗಳನ್ನು ಪರಿಚಯಿಸಿದವರು ಯಾರು ಮತ್ತು ಈತನ ಸೇನೆಯ ಪ್ರಸಿದ್ಧ ಪ್ರಧಾನ ದಂಡ ನಾಯಕನಾರು ? | |
| (1) | ಕುತುಬುದ್ದೀನ ಐಬಕ್ - ಅಮೀರ್ ಖುಸ್ರೋ | |
| (2) | ಮಹಮ್ಮದ್ ಬಿನ್ ತುಘಲಕ್ - ಆಬ್ದುಲ್ ರಜಾಕ್ | |
| (3) | ಅಲ್ಲಾವುದ್ದೀನ ಖಿಲ್ಜಿ - ಮಲ್ಲಿಕ್ ಕಾಫರ್ | |
| (4) | ಜಲಾಲುದ್ದೀನ್ ಖಿಲ್ಜಿ - ಹಸನ್ ನಿಜಾಮಿ | |
ಸರಿ ಉತ್ತರ
(3) ಅಲ್ಲಾವುದ್ದೀನ ಖಿಲ್ಜಿ - ಮಲ್ಲಿಕ್ ಕಾಫರ್
| 15. | ಇತ್ತೀಚೆಗೆ ಜಕಾರ್ತದಲ್ಲಿ 18 ನೇ ಏಷಿಯನ್ ಕ್ರೀಡೆಗಳಲ್ಲಿ ದಾಖಲೆ ನಿರ್ಮಿಸಿದ, ಚಿನ್ನವನ್ನು ಗೆದ್ದ ಮೊದಲ ಭಾರತೀಯ ಸೇನೆಯ ಹೆಪ್ಟಾಅಥ್ಲೀಟ್ ಯಾರು ? | |
| (1) | ಅರ್ಚನಾ ಬಿಸ್ವಾಸ್ | |
| (2) | ಸ್ವಪ್ನ ಬರ್ಮನ್ | |
| (3) | ಲೀಲಾ ದೇವರಾಜ್ | |
| (4) | ಪೂರ್ಣಿಮಾ ಅಯ್ಯಪ್ಪ | |
ಸರಿ ಉತ್ತರ
(2) ಸ್ವಪ್ನ ಬರ್ಮನ್
| 16. | ರಾಜ್ಯ ನೀತಿಯ ನಿರ್ದೇಶಕ ತತ್ವಗಳಲ್ಲಿನ ಯಾವ ಕಲಮು, ಗ್ರಾಮ ಪಂಚಾಯಿತಿಯ ಉಪಬಂಧದೊಂದಿಗೆ ವ್ಯವಹರಿಸುತ್ತದೆ ? | |
| (1) | 40 ನೇ ಕಲಮು | |
| (2) | 42 ನೇ ಕಲಮು | |
| (3) | 44 ನೇ ಕಲಮು | |
| (4) | 36 ನೇ ಕಲಮು | |
ಸರಿ ಉತ್ತರ
(1) 40 ನೇ ಕಲಮು
| 17. | ಯಾವ ಸಮಿತಿಯು ಪ್ರಜಾಪ್ರಭುತ್ವ ವಿಕೇಂದ್ರೀಕರಣಕ್ಕಾಗಿ ಶಿಫಾರಸನ್ನು ಮಾಡಿದ ಮೊದಲ ಸಮಿತಿ ಯಾವುದು ? | |
| (1) | ಅಶೋಕ್ ಮೆಹ್ತಾ ಸಮಿತಿ | |
| (2) | ಮಂಡಲ್ ಆಯೋಗ | |
| (3) | ಬಲವಂತ ರಾಯ್ ಮೆಹ್ತಾ ಸಮಿತಿ | |
| (4) | ಕೊಂಡಜ್ಜಿ ಬಸಪ್ಪ ಸಮಿತಿ | |
ಸರಿ ಉತ್ತರ
(3) ಬಲವಂತ ರಾಯ್ ಮೆಹ್ತಾ ಸಮಿತಿ
| 18. | ಕಳಸಾ ಮತ್ತು ಬಂಡೂರಿ ಇವು ಈ ಕೆಳಗಿನ ಯಾವ ನದಿಯ ಎರಡು ಚಿಕ್ಕ ಉಪನದಿಗಳು ? | |
| (1) | ಕೃಷ್ಣ | |
| (2) | ಭೀಮಾ | |
| (3) | ಮಲಪ್ರಭಾ | |
| (4) | ಘಟಪ್ರಭಾ | |
ಸರಿ ಉತ್ತರ
(3) ಮಲಪ್ರಭಾ
| 19. | ಇತ್ತೀಚೆಗೆ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ‘ಗೋಲ್ಡ್ ಕೋಸ್ಟ್’ ನಗರದಲ್ಲಿ ಆಯೋಜಿಸಲಾಗಿತ್ತು. ಗೋಲ್ಡ್ ಕೋಸ್ಟ್ ನಗರವಿರುವುದು ಇಲ್ಲಿ | |
| (1) | ನ್ಯೂ ಸೌತ್ ವೇಲ್ಸ್ | |
| (2) | ಕ್ವೀನ್ಸ್ ಲ್ಯಾಂಡ್ | |
| (3) | ವಿಕ್ಟೋರಿಯಾ | |
| (4) | ವೆಸ್ಟರ್ನ್ ಆಸ್ಟ್ರೇಲಿಯಾ | |
ಸರಿ ಉತ್ತರ
(2) ಕ್ವೀನ್ಸ್ ಲ್ಯಾಂಡ್
| 20. | ಇದರ ಉತ್ಪಾದನೆಗೆ ಸಿಂಗರೇಣಿ ಗಣಿಗಳು ಪ್ರಸಿದ್ಧಿ ಪಡೆದಿರುವುದು | |
| (1) | ಯುರೇನಿಯಂ ಮತ್ತು ಥೋರಿಯಂ | |
| (2) | ಪೆಟ್ರೋಲಿಯಂ | |
| (3) | ಕಲ್ಲಿದ್ದಲು | |
| (4) | ಕಬ್ಬಿಣದ ಅದಿರು | |
ಸರಿ ಉತ್ತರ
(3) ಕಲ್ಲಿದ್ದಲು
| 21. | ಇಲ್ಲಿ ಪ್ರಪಂಚದ ಅತಿದೊಡ್ಡ ಸಿಹಿ ನೀರಿನ ಸರೋವರಗಳಲ್ಲಿ ಒಂದಾದ ಬೈಕಲ್ ಸರೋವರವಿದೆ | |
| (1) | ರಷ್ಯಾ | |
| (2) | ಕೆನಡಾ | |
| (3) | ಯು.ಎಸ್.ಎ. | |
| (4) | ಫಿನ್ಲ್ಯಾಂಡ್ | |
ಸರಿ ಉತ್ತರ
(1) ರಷ್ಯಾ
| 22. | ಪಟ್ಟಿ I ಮತ್ತು ಪಟ್ಟಿ II ಗಳನ್ನು ಹೊಂದಿಸಿರಿ : | |
| ಪಟ್ಟಿ I | ಪಟ್ಟಿ II | |||
| A. | ಪಾಂಪಾಸ್ | I. | ಆಫ್ರಿಕ | |
| B. | ವೆಲ್ಡ್ಸ್ | II. | ಯುರೇಷಿಯಾ | |
| C. | ಸ್ಟೆಪ್ಪೀಸ್ | III. | ದಕ್ಷಿಣ ಅಮೆರಿಕಾ | |
| D. | ಪ್ರೈರೀಸ್ | IV. | ಉತ್ತರ ಅಮೆರಿಕಾ | |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : | ||||
| A | B | C | D | ||
| (1) | III | I | II | IV | |
| (2) | II | I | IV | III | |
| (3) | IV | III | II | I | |
| (4) | I | II | III | IV |
ಸರಿ ಉತ್ತರ
(1) III I II IV
| 23. | 23° N ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಈ ಕೆಳಗಿನ ರಾಜ್ಯಗಳ ಮೂಲಕ ಹಾದು ಹೋಗುತ್ತದೆ ? | |
| (1) | ಗುಜರಾತ್, ರಾಜಸ್ತಾನ್, ಮಧ್ಯ ಪ್ರದೇಶ, ಝಾರ್ಖಂಡ್, ಛತ್ತೀಸ್ ಘಡ್, ಪಶ್ಚಿಮ ಬಂಗಾಳ, ತ್ರಿಪುರಾ, ಮಿರೆರಾಂ | |
| (2) | ಗುಜರಾತ್, ರಾಜಸ್ತಾನ್, ಮಧ್ಯ ಪ್ರದೇಶ್, ಛತ್ತೀಸ್ ಘಡ್, ಝಾರ್ಖಂಡ್, ಪಶ್ಚಿಮ ಬಂಗಾಳ, ಮಿರೆರಾಂ, ತ್ರಿಪುರಾ | |
| (3) | ಗುಜರಾತ್, ರಾಜಸ್ತಾನ್, ಮಧ್ಯ ಪ್ರದೇಶ್, ಛತ್ತೀಸ್ ಘಡ್, ಝಾರ್ಖಂಡ್, ಪಶ್ಚಿಮ ಬಂಗಾಳ, ತ್ರಿಪುರಾ, ಮಿರೆರಾಂ | |
| (4) | ಗುಜರಾತ್, ರಾಜಸ್ತಾನ್, ಮಧ್ಯ ಪ್ರದೇಶ್, ಛತ್ತೀಸ್ ಘಡ್, ಪಶ್ಚಿಮ ಬಂಗಾಳ, ಝಾರ್ಖಂಡ್, ತ್ರಿಪುರಾ, ಮಿರೆರಾಂ | |
ಸರಿ ಉತ್ತರ
(3) ಗುಜರಾತ್, ರಾಜಸ್ತಾನ್, ಮಧ್ಯ ಪ್ರದೇಶ್, ಛತ್ತೀಸ್ ಘಡ್, ಝಾರ್ಖಂಡ್, ಪಶ್ಚಿಮ ಬಂಗಾಳ, ತ್ರಿಪುರಾ, ಮಿರೆರಾಂ
| 24. | ಯಾವ ರೇಖಾಂಶವು ಹಿಂದೂಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ಮಧ್ಯೆ ಗಡಿ ರೇಖೆಯನ್ನು ರೂಪಿಸುತ್ತದೆ ? | |
| (1) | ಕೇಪ್ ಆಫ್ ಟೌನ್ ನ ರೇಖಾಂಶ | |
| (2) | ಪರ್ತ್ ನ ರೇಖಾಂಶ | |
| (3) | ಕೇಪ್ ಆಫ್ ತಸ್ಮೀನಿಯಾದ ರೇಖಾಂಶ | |
| (4) | ವೆಲ್ಲಿಂಗ್ ಟನ್ ನ ರೇಖಾಂಶ | |
ಸರಿ ಉತ್ತರ
(3) ಕೇಪ್ ಆಫ್ ತಸ್ಮೀನಿಯಾದ ರೇಖಾಂಶ
| 25. | ಕೆಳಗಿನವುಗಳಲ್ಲಿ ಕನಕದಾಸರನ್ನು ಗುರುತಿಸುವ ಕೃತಿ ಯಾವುದು ? | |
| (1) | ಪ್ರಭುಲಿಂಗ ಲೀಲೆ | |
| (2) | ಜೈಮಿನಿ ಭಾರತ | |
| (3) | ರಾಮಧಾನ್ಯ ಚರಿತೆ | |
| (4) | ಬಸವ ಪುರಾಣ | |
ಸರಿ ಉತ್ತರ
(3) ರಾಮಧಾನ್ಯ ಚರಿತೆ
| 26. | ದ್ವಿತೀಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಯಾರು ಸೋತರು? | |
| (1) | ಹೈದರ್ ಅಲಿ | |
| (2) | ಟಿಪ್ಪು ಸುಲ್ತಾನ್ | |
| (3) | ನಿಜಾಮ್-ಉದ್-ದೌಲ | |
| (4) | ಚಂದಾ ಸಾಹೇಬ್ | |
ಸರಿ ಉತ್ತರ
(1) ಹೈದರ್ ಅಲಿ
| 27. | 360 ನೇ ಕಲಮಿನಡಿ ಘೋಷಿಸಲ್ಪಟ್ಟ ವಿತ್ತೀಯ ತುರ್ತುಪರಿಸ್ಥಿತಿಯು ಕೇಂದ್ರ ಸಂಸತ್ತಿನಿಂದ ಅನುಮೋದನೆಗೊಳ್ಳದ ಹೊರತು, __________ ದಿನಗಳ ಅಂತ್ಯದ ನಂತರ ನಿಲುಗಡೆಯಾಗುವುದು. | |
| (1) | 10 ದಿನಗಳು | |
| (2) | 14 ದಿನಗಳು | |
| (3) | 1 ತಿಂಗಳು | |
| (4) | 2 ತಿಂಗಳು | |
ಸರಿ ಉತ್ತರ
(4) 2 ತಿಂಗಳು
| 28. | ನೇರಳಾತೀತ ಬೆಳಕಿನ ಆವರ್ತಾಂಕವು | |
| (1) | ನೋಡಲಾಗುವ ಬೆಳಕಿನ ವ್ಯಾಪ್ತಿಗಿಂತ ಕೆಳಗಿನದು | |
| (2) | ಅವರೋಹಿತ ಬೆಳಕಿನ ವ್ಯಾಪ್ತಿಗಿಂತ ಕೆಳಗಿನದು | |
| (3) | ನೋಡಲಾಗುವ ಬೆಳಕಿನ ವ್ಯಾಪ್ತಿಗಿಂತ ಮೇಲಿನದು | |
| (4) | ಅವರೋಹಿತ ಬೆಳಕಿನ ವ್ಯಾಪ್ತಿಗಿಂತ ಮೇಲಿನದು | |
ಸರಿ ಉತ್ತರ
(3) ನೋಡಲಾಗುವ ಬೆಳಕಿನ ವ್ಯಾಪ್ತಿಗಿಂತ ಮೇಲಿನದು
| 29. | ಡಿ.ಎನ್.ಎ. ಕೈಬೆರಳಚ್ಚು ಇದಕ್ಕೆ ಸಂಬಂಧಿಸಿದ್ದು | |
| (1) | ವಿವಿಧ ಡಿ.ಎನ್.ಎ. ಪ್ರೊಫೈಲ್ ಗಳ (ರೇಖಾಕೃತಿ) ಆಣುವಿಕ ವಿಶ್ಲೇಷಣೆ | |
| (2) | ಬೆರಳಚ್ಚುಗಳ ಗುರುತಿಸುವರೆಗೆ ಉಪಯೋಗ ಆಗುವ ತಂತ್ರನಗಳು | |
| (3) | ಡಿ.ಎನ್.ಎ. ಮಾದರಿಗಳ ವಿಶ್ಲೇಷಣೆಯು ಅಚ್ಚು / ಮುದ್ರೆ ಸಾಧನಗಳನ್ನು ಬಳಸುತ್ತದೆ | |
| (4) | ಮಾಲಿಕ್ಯುಲರ್ (ಆಣ್ವಿಕ) ಜೆನೆಟಿಕ್ ವಿಧಾನವು ಕೂದಲು, ರಕ್ತ, ವೀರ್ಯ ಅಥವಾ ಇತರ ಜೀವ ವಿಜ್ಞಾನೀಯ ಮಾದರಿಗಳನ್ನು ವಿಶಿಷ್ಟ ನಮೂನೆಗಳನ್ನು ಆಧರಿಸಿ ವ್ಯಕ್ತಿಗಳ ಗುರ್ತಿಸುವಿಕೆಯನ್ನು ಮಾಡಲು ಸಾಧ್ಯವಾಗಿಸುತ್ತದೆ | |
ಸರಿ ಉತ್ತರ
(1) ವಿವಿಧ ಡಿ.ಎನ್.ಎ. ಪ್ರೊಫೈಲ್ ಗಳ (ರೇಖಾಕೃತಿ) ಆಣುವಿಕ ವಿಶ್ಲೇಷಣೆ
| 30. | ಸ್ಟ್ರಾಟೋಸ್ಪಿಯರ್ (ವಾಯುಮಂಡಲ) ಮತ್ತು ಟ್ರೋಪೊಸ್ಪಿಯರ್ಗಳನ್ನು ಪ್ರತ್ಯೇಕಿಸುವ ವಾತಾವರಣದ ತೆಳು ಸಾಗಣೆ ಪದರವನ್ನು ಹೀಗೆನ್ನುತ್ತಾರೆ | |
| (1) | ಟ್ರೋಪೋಪಾಸ್ | |
| (2) | ಸ್ಟ್ರಾಟೋಪಾಸ್ | |
| (3) | ಮೀಸೋಪಾಸ್ | |
| (4) | ಥರ್ಮೋಪಾಸ್ | |
ಸರಿ ಉತ್ತರ
(1) ಟ್ರೋಪೋಪಾಸ್
| 31. | ಜಲ ಮಾಲಿನ್ಯವನ್ನು ಸೂಚಿಸುವ ಸಸ್ಯ ಜಾತಿ ಪ್ರಭೇದವು | |
| (1) | ಹೈಡ್ರಿಲ್ಲಾ ಜಾತಿ ಪ್ರಭೇದ | |
| (2) | ಐಕೊರ್ನಿಯಾ ಜಾತಿ ಪ್ರಭೇದ | |
| (3) | ಯುಪಟೋರಿಯಂ ಜಾತಿ ಪ್ರಭೇದ | |
| (4) | ಟ್ರೈಡಕ್ಸ್ ಜಾತಿ ಪ್ರಭೇದ | |
ಸರಿ ಉತ್ತರ
(2) ಐಕೊರ್ನಿಯಾ ಜಾತಿ ಪ್ರಭೇದ
| 32. | ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಭೀರ ಆರೋಗ್ಯ ತೊಂದರೆ ಉಂಟು ಮಾಡಿದ ಕೀಟನಾಶಕ | |
| (1) | DDT | |
| (2) | ಎಂಡೊಸಲ್ಫಾನ್ | |
| (3) | ಸೈಪರ್ಮೆಥ್ರಿನ್ | |
| (4) | ಕ್ಲೊರ್ ಪೈರಿಫೋಸ್ | |
ಸರಿ ಉತ್ತರ
(2) ಎಂಡೊಸಲ್ಫಾನ್
| 33. | ಮಾನವನಲ್ಲಿ ಸೀಸಕ್ಕೆ ತೀವ್ರ ಒಡ್ಡುವಿಕೆಯಿಂದುಂಟಾಗುವ ರೋಗವು | |
| (1) | ಇಟಾಯಿ-ಇಟಾಯಿ | |
| (2) | ನ್ಯೂರಾಲ್ಜಿಯಾ | |
| (3) | ಪ್ಲಂಬಿಸಂ | |
| (4) | ಬೈಸಿನ್ನೊಸಿಸ್ | |
ಸರಿ ಉತ್ತರ
(3) ಪ್ಲಂಬಿಸಂ
| 34. | ಪೇಲಿಯೋ ಇಕಾಲಜಿಯು (ಪರಿಸರವು) ಇದಕ್ಕೆ ಸಂಬಂಧಿಸಿದೆ | |
| (1) | ಪ್ರಸ್ತುತ ಅಸ್ತಿತ್ವದಲ್ಲಿರುವ ಜೀವಿಗಳು ಮತ್ತು ಅವುಗಳ ಪರಿಸರ | |
| (2) | ದೂರದ, ಭೌಗೋಳೀಯವಾಗಿ ಹಿಂದೆ ಅಸ್ತಿತ್ವದಲ್ಲಿದ್ದ ಜೀವಿಗಳು ಮತ್ತು ಅವುಗಳ ಪರಿಸರ | |
| (3) | ಬಾಹ್ಯಾಕಾಶದಲ್ಲಿ ಅಸ್ತಿತ್ವದಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು | |
| (4) | ಇವ್ಯಾವುವೂ ಅಲ್ಲ | |
ಸರಿ ಉತ್ತರ
(2) ದೂರದ, ಭೌಗೋಳೀಯವಾಗಿ ಹಿಂದೆ ಅಸ್ತಿತ್ವದಲ್ಲಿದ್ದ ಜೀವಿಗಳು ಮತ್ತು ಅವುಗಳ ಪರಿಸರ
| 35. | ಪಟ್ಟಿ I (ಆಕರ) ಮತ್ತು ಪಟ್ಟಿ II (ಶಕ್ತಿ ಉತ್ಪಾದನೆ) ಗಳನ್ನು ಹೊಂದಿಸಿ : | |
| ಪಟ್ಟಿ I (ಆಕರ) | ಪಟ್ಟಿ II (ಶಕ್ತಿ ಉತ್ಪಾದನೆ) | |||
| A. | ಮರ | I. | ಮೀಥೇನ್ | |
| B. | ತಾಳೆ ಎಣ್ಣೆ | II. | ಎಥನಾಲ್ | |
| C. | ಕಬ್ಬು | III. | ಬಯೋಡೀಸೆಲ್ | |
| D. | ಪ್ರಾಣಿ ಅವಶೇಷಗಳು ಮತ್ತು ಗೊಬ್ಬರಗಳು | IV. | ಇದ್ದಿಲು | |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : | ||||
| A | B | C | D | ||
| (1) | IV | III | I | II | |
| (2) | IV | I | II | III | |
| (3) | III | I | II | IV | |
| (4) | IV | III | II | I |
ಸರಿ ಉತ್ತರ
(4) IV III II I
| 36. | ಭೂ ಜಲದಲ್ಲಿನ ಟೆಟ್ರಾಕ್ಲೊರೋ ಇಥಿಲೀನ್ ನ ಪ್ರಧಾನ ಆಕರ | |
| (1) | ಲೋಹ ಲೇಪನ (ಪ್ಲೇಟಿಂಗ್) | |
| (2) | ಡ್ರೈಕ್ಲೀನಿಂಗ್ (ಶುಷ್ಕ ಶುದ್ಧ ಗೊಳಿಸುವಿಕೆ) | |
| (3) | ಔಷಧಗಳು | |
| (4) | ಆಸ್ಫಾಲ್ಟ್ ಉತ್ಪಾದನೆ | |
ಸರಿ ಉತ್ತರ
(2) ಡ್ರೈಕ್ಲೀನಿಂಗ್ (ಶುಷ್ಕ ಶುದ್ಧ ಗೊಳಿಸುವಿಕೆ)
| 37. | ಭಾರತದ ಪ್ರಥಮ ಮಹಿಳಾ ಮುಖ್ಯ ಚುನಾವಣಾ ಆಯುಕ್ತರನ್ನು ಗುರುತಿಸಿರಿ. | |
| (1) | ಶ್ರೀಮತಿ ನೀಲಮಣಿ ರಾಜು | |
| (2) | ಶ್ರೀಮತಿ ಮಾಲತಿ ದಾಸ್ | |
| (3) | ಶ್ರೀಮತಿ ಎಮ್. ಫಾಥಿಮಾ ಬೀವಿ | |
| (4) | ಶ್ರೀಮತಿ ವಿ.ಎಸ್. ರಮಾದೇವಿ | |
ಸರಿ ಉತ್ತರ
(4) ಶ್ರೀಮತಿ ವಿ.ಎಸ್. ರಮಾದೇವಿ
| 38. | ಸರಕು ಮತ್ತು ಸೇವಾ ತೆರಿಗೆಯನ್ನು (GST) ಭಾರತ ಸಂವಿಧಾನದ ಕೆಳಗಿನ ಯಾವ ತಿದ್ದುಪಡಿಯ ಮೂಲಕ ಜಾರಿಗೆ ತರಲಾಯಿತು ? | |
| (1) | 99 ನೆಯ | |
| (2) | 101 ನೆಯ | |
| (3) | 96 ನೆಯ | |
| (4) | 94 ನೆಯ | |
ಸರಿ ಉತ್ತರ
(2) 101 ನೆಯ
| 39. | ‘‘ಕೊರಿಯಾ ಪರ್ಯಾಯ ದ್ವೀಪದ ಮೇಲೆ ಇನ್ನು ಮುಂದೆ ಯುದ್ಧವಿಲ್ಲ’’ ಮತ್ತು ‘‘ಸಂಪೂರ್ಣ ಅಣ್ವಸ್ತ್ರ ನಾಶ’’ — ಎಂಬ ಘೋಷಣೆಯನ್ನು ಇತ್ತೀಚೆಗಷ್ಟೇ ಕೊರಿಯನ್ ಶೃಂಗಸಭೆಯಲ್ಲಿ ಮಾಡಲಾಗಿದ್ದು, ಇದು ಇವರಿಂದ ಸಹಿ ಹಾಕಲ್ಪಟ್ಟಿದೆ | |
| (1) | ಉತ್ತರ ಕೊರಿಯಾ ಮತ್ತು ಯು.ಎಸ್.ಎ. | |
| (2) | ಉತ್ತರ ಕೊರಿಯಾ ಮತ್ತು ಜಪಾನ್ | |
| (3) | ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ | |
| (4) | ಉತ್ತರ ಕೊರಿಯಾ ಮತ್ತು ಚೀನಾ | |
ಸರಿ ಉತ್ತರ
(3) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ
| 40. | ಚಹಾಬಾರ್ ಅಂತರರಾಷ್ಟ್ರೀಯ ಬಂದರಿನ ಬೆಳವಣಿಗೆಯಲ್ಲಿ ಭಾರತವು ಮುಖ್ಯ ಪಾತ್ರವನ್ನು ವಹಿಸಿದ್ದು ಇದು ಈ ಕೆಳಗಿನ ಯಾವ ರಾಷ್ಟ್ರಕ್ಕೆ ಸೇರಿದ್ದು ? | |
| (1) | ಪಾಕೀಸ್ತಾನ | |
| (2) | ಆಪ್ಘಾನಿಸ್ಥಾನ | |
| (3) | ಸೌದಿ ಅರೇಬಿಯಾ | |
| (4) | ಇರಾನ್ | |
ಸರಿ ಉತ್ತರ
(4) ಇರಾನ್
| 41. | ಪಟ್ಟಿ I (ಮಂಡಳಿ) ಮತ್ತು ಪಟ್ಟಿ II (ಕೇಂದ್ರಸ್ಥಾನ) ಗಳನ್ನು ಹೊಂದಿಸಿ : | |
| ಪಟ್ಟಿ I(ಮಂಡಳಿ) | ಪಟ್ಟಿ II(ಕೇಂದ್ರಸ್ಥಾನ) | |||
| A. | ಕಾಫಿ ಮಂಡಳಿ | I. | ಬೆಂಗಳೂರು | |
| B. | ರಬ್ಬರ್ ಮಂಡಳಿ | II. | ಗುಂಟೂರು | |
| C. | ಚಹಾ ಮಂಡಳಿ | III. | ಕೊಟ್ಟಾಯಂ | |
| D. | ಹೊಗೆಸೊಪ್ಪು ಮಂಡಳಿ | IV. | ಕೋಲ್ಕತಾ | |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : | ||||
| A | B | C | D | ||
| (1) | II | IV | III | I | |
| (2) | I | III | IV | II | |
| (3) | II | III | IV | I | |
| (4) | I | IV | III | II |
ಸರಿ ಉತ್ತರ
(2) I III IV II
| 42. | ವಿಶ್ವದ ಅತಿ ದೊಡ್ಡದಾದ ಬಿಸಿ ಮರುಭೂಮಿಯು | |
| (1) | ಕಲಹರಿ | |
| (2) | ಗೋಬಿ | |
| (3) | ಸಹಾರಾ | |
| (4) | ಥಾರ್ | |
ಸರಿ ಉತ್ತರ
(3) ಸಹಾರಾ
| 43. | ಆಳ ಸಮುದ್ರ ಮುಳುಗುಕಾರರು ಇದರಿಂದ ಭರ್ತಿಯಾದ ಧಾರಕಗಳನ್ನು ಬಳಸಿ ಉಸಿರಾಡುತ್ತಾರೆ | |
| (1) | ಆಮ್ಲಜನಕ ಮಾತ್ರ | |
| (2) | ಆಮ್ಲಜನಕ ಮತ್ತು ಹೀಲಿಯಂಗಳ ಮಿಶ್ರಣ | |
| (3) | ಆಮ್ಲಜನಕ ಮತ್ತು ಸಾರಜನಕಗಳ ಮಿಶ್ರಣ | |
| (4) | ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ಗಳ ಮಿಶ್ರಣ | |
ಸರಿ ಉತ್ತರ
(2) ಆಮ್ಲಜನಕ ಮತ್ತು ಹೀಲಿಯಂಗಳ ಮಿಶ್ರಣ
| 44. | ಮಳೆಗಾಲದಲ್ಲಿ ತೈಲ ಚೆಲ್ಲಿ ಹರಡಿದ್ದಾಗ ರಸ್ತೆ ಮೇಲೆ ಬಣ್ಣದ ವಿನ್ಯಾಸವನ್ನು ನೀವು ನೋಡುವಿರಿ ಅದಕ್ಕೆ ಕಾರಣ | |
| (1) | ಬೆಳಕಿನ ಪ್ರತಿಫಲನ | |
| (2) | ಭೂಮಿಯ ಮೇಲ್ಮೈನಲ್ಲಿ ತೈಲದ ಪೊರೆ ಉಂಟು ಮಾಡುವ ಬೆಳಕಿನ ವಿವರ್ತನ | |
| (3) | ಭೂಮಿಯ ಮೇಲ್ಮೈ ಮೇಲೆ ತೈಲ ಪೊರೆ ಉಂಟು ಮಾಡುವ ವ್ಯತಿಕರಣ | |
| (4) | ಬೆಳಕಿನ ವರ್ಣ ವಿಭಜನೆ | |
ಸರಿ ಉತ್ತರ
(3) ಭೂಮಿಯ ಮೇಲ್ಮೈ ಮೇಲೆ ತೈಲ ಪೊರೆ ಉಂಟು ಮಾಡುವ ವ್ಯತಿಕರಣ
| 45. | ಒಂದು ಲಿಫ್ಟ್ ವೇಗೋತ್ಕರ್ಷದೊಡನೆ ಮೇಲೆ ಹೋಗುತ್ತಿದ್ದಲ್ಲಿ ಒಂದು ವಸ್ತುವಿನ ಅಳೆಯಲಾದ ತುಕವು | |
| (1) | ನಿಜತೂಕಕ್ಕಿಂತ ಅಧಿಕ | |
| (2) | ನಿಜತೂಕಕ್ಕಿಂತ ಕಡಿಮೆ | |
| (3) | ತೂಕದಲ್ಲಿ ಬದಲಾವಣೆ ಇಲ್ಲ | |
| (4) | ಯಾವುವೂ ಅಲ್ಲ | |
ಸರಿ ಉತ್ತರ
(1) ನಿಜತೂಕಕ್ಕಿಂತ ಅಧಿಕ
| 46. | ಡೈಆಪ್ಟರ್ ಇದರ ಏಕಮಾನವಾಗಿದೆ | |
| (1) | ಮಸೂರದ ಸಾಮರ್ಥ್ಯ | |
| (2) | ಮಸೂರದ ಸಂಗಮ ದೂರ | |
| (3) | ರಂಧ್ರ | |
| (4) | ಕ್ಯಾಮೆರಾದಲ್ಲಿನ ಮುಚ್ಚಳದ ವೇಗ | |
ಸರಿ ಉತ್ತರ
(1) ಮಸೂರದ ಸಾಮರ್ಥ್ಯ
| 47. | ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
| ಗಡಸು ನೀರು ಇದಕ್ಕೆ ಸೂಕ್ತವಲ್ಲ | ||
| A. | ಕುಡಿಯಲು | |
| B. | ಸಾಬೂನಿನೊಂದಿಗೆ ಬಟ್ಟೆಗಳನ್ನು ತೊಳೆಯಲು | |
| C. | ಬಾಯ್ಲರ್ ಗಳಲ್ಲಿ ಬಳಸಲು | |
| D. | ಬೆಳೆಗಳ ನೀರಾವರಿಗೆ | |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | ||
| (1) | A ಮತ್ತು C ಮಾತ್ರ | |
| (2) | B ಮತ್ತು C ಮಾತ್ರ | |
| (3) | A, B ಮತ್ತು D ಮಾತ್ರ | |
| (4) | A, B, C ಮತ್ತು D | |
ಸರಿ ಉತ್ತರ
(2) B ಮತ್ತು C ಮಾತ್ರ
| 48. | ಜಿಬ್ರಾಲ್ಟರ್ ಜಲ ಸಂಧಿಯು ಯಾವ ದೇಶ ಮತ್ತು ಯಾವ ಸಮುದ್ರಗಳನ್ನು ಪ್ರತ್ಯೇಕಿಸುತ್ತದೆ ? | |
| (1) | ಸ್ಪೈನ್, ಮೊರೊಕ್ಕೊ ಮತ್ತು ಮೆಡಿಟೆರಿಯನ್ ಸಮುದ್ರ | |
| (2) | ಪೋರ್ಚುಗಲ್, ಮೊರೊಕ್ಕೊ ಮತ್ತು ಕಪ್ಪು ಸಮುದ್ರ | |
| (3) | ಆಲ್ಜೀರಿಯಾ, ಸ್ಪೈನ್ ಮತ್ತು ಕ್ಯಾಸ್ಪಿಯನ್ ಸಮುದ್ರ | |
| (4) | ಪೋರ್ಚುಗಲ್, ಆಲ್ಜೀರಿಯಾ ಮತ್ತು ಕೆಂಪು ಸಮುದ್ರ | |
ಸರಿ ಉತ್ತರ
(1) ಸ್ಪೈನ್, ಮೊರೊಕ್ಕೊ ಮತ್ತು ಮೆಡಿಟೆರಿಯನ್ ಸಮುದ್ರ
| 49. | ‘‘ಡೊಮಿನಿಯನ್ ಸ್ಥಾನಮಾನ ಪರಿಕಲ್ಪನೆ ಬಾಗಿಲ ಮೊಳೆಯಹಾಗೆ ಮೃತ.’’ ಈ ಹೇಳಿಕೆ ನೀಡಿದವರು ಯಾರು ? | |
| (1) | ಮಹಾತ್ಮಾ ಗಾಂಧಿ | |
| (2) | ಡಾ. ರಾಜೇಂದ್ರ ಪ್ರಸಾದ್ | |
| (3) | ವಿನೋಬಾ ಭಾವೆ | |
| (4) | ಜವಹರ್ ಲಾಲ್ ನೆಹರೂ | |
ಸರಿ ಉತ್ತರ
(4) ಜವಹರ್ ಲಾಲ್ ನೆಹರೂ
| 50. | ಈ ಕೆಳಗಿನ ಪೈಕಿ ಯಾವ ಎರಡು ದೇಶಗಳು ವಿಶ್ವದಲ್ಲಿ ಅತ್ಯಧಿಕ ಕಬ್ಬು ಉತ್ಪಾದಿಸುವ ದೇಶಗಳು? | |
| (1) | ಬ್ರೆಜಿಲ್, ಭಾರತ | |
| (2) | ಚೈನಾ, ಭಾರತ | |
| (3) | ಫಿಲಿಪೈನ್ಸ್, ಇಂಡೊನೇಷಿಯಾ | |
| (4) | ಇಂಡೊನೇಷಿಯಾ, ಭಾರತ | |
ಸರಿ ಉತ್ತರ
(1) ಬ್ರೆಜಿಲ್, ಭಾರತ
| 51. | ಮಾನವ ರಕ್ತದ ಗುಂಪುಗಳು ಮತ್ತು ಪ್ರತಿಕಾಯಗಳ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿಯನ್ನು ಗಳಿಸಿದವರಾರು ? | |
| (1) | ಕೆ. ಲ್ಯಾಂಡ್ ಸ್ಟೈನರ್ | |
| (2) | ಟಿ. ಸ್ವಡ್ ಬರ್ಗ್ | |
| (3) | ಓ. ವಾರಬರ್ಗ್ | |
| (4) | ಟಿ.ಹೆಚ್. ಮಾರ್ಗನ್ | |
ಸರಿ ಉತ್ತರ
(1) ಕೆ. ಲ್ಯಾಂಡ್ ಸ್ಟೈನರ್
| 52. | ಕೆಳಗಿನ ದೆಹಲಿ ಸುಲ್ತಾನ ಮನೆತನಗಳನ್ನು ಕಾಲಾನುಕ್ರಮಣಿಕೆಯಲ್ಲಿ ಜೋಡಿಸಿ : | |
| A. | ಗುಲಾಮೀ | |
| B. | ಖಿಲ್ಜಿ | |
| C. | ತುಘಲಕ್ | |
| D. | ಸೈಯದ್ | |
| E. | ಲೋದಿ | |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
| (1) | B, A, C, D, E | |
| (2) | A, B, C, D, E | |
| (3) | A, B, D, C, E | |
| (4) | A, B, D, E, C | |
ಸರಿ ಉತ್ತರ
(2) A, B, C, D, E
| 53. | ಐ.ಟಿ. ಸಚಿವಾಲಯದಿಂದ 7 ಭಾಷೆಗಳು - ಹಿಂದಿ, ಬಾಂಗ್ಲಾ, ಮಲೆಯಾಳಂ, ಗುರುಮುಖಿ, ತಮಿಳು, ಕನ್ನಡ ಮತ್ತು ಅಸ್ಸಾಮೀಗಳಲ್ಲಿ ತಂತ್ರಾಂಶವನ್ನು ಜಾರಿಗೆ ತಂದ ಮುದ್ರಿತ ಭಾರತೀಯ ಭಾಷೆಗಳ ದಾಖಲೆಗಳನ್ನು ಪೂರ್ಣವಾಗಿ ಸಂಪಾದಿಸಬಲ್ಲ ಪಠ್ಯ ಕೋಡ್ ಆಗಿ ಯೂನಿಕೋಡ್ ಎನ್ಕೋಡಿಂಗ್ ರೂಪಿಸಿ ಭಾರತೀಯ ಭಾಷೆಗಳಲ್ಲಿನ ವಿಷಯದ ಅಲಭ್ಯಕೆಯಿಂದಾಗಿ ಅಂತರ್ಜಾಲ ಲಭ್ಯತೆಯ ಅಂತರವನ್ನು ಕೊನೆಗೋಳಿಸಿತು, ಈ ತಂತ್ರಾಂಶದ ಹೆಸರು | |
| (1) | e-ಅಕ್ಷರಯಾನ | |
| (2) | e-ಭಾಷ್ಯಾಂತರ | |
| (3) | e-ವಾಚನ | |
| (4) | ಇಂಡಿ ಡಾಕ್ ಟೈಪ್ | |
ಸರಿ ಉತ್ತರ
(1) e-ಅಕ್ಷರಯಾನ
| 54. | ಈ ಕೆಳಗಿನವುಗಳಲ್ಲಿ ಯಾವ ವಾಹಕವು ಭಾರತದ ಮೊತ್ತಮೊದಲಿನ ಬಯೋಜೆಟ್ ಇಂಧನ ಸಾಮರ್ಥ್ಯದ ಜೆಟ್ ಹಾರಾಟವನ್ನು ಡೆಹ್ರಾಡೂನ್ ಮತ್ತು ನವದೆಹಲಿ ನಡುವೆ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿಸಿತು ? | |
| (1) | ಸ್ಪೈಸ್ ಜೆಟ್ | |
| (2) | ವಿಸ್ತಾರ | |
| (3) | ಇಂಡಿಗೋ | |
| (4) | ಗೋ ಏರ್ | |
ಸರಿ ಉತ್ತರ
(1) ಸ್ಪೈಸ್ ಜೆಟ್
| 55. | ಪ್ರಸಿದ್ಧ ದಿಗಂಬರ ಜೈನ ಮುನಿ ತರುಣ್ ಸಾಗರ್ ಜೀ ಇತ್ತೀಚೆಗೆ ನವದೆಹಲಿಯಲ್ಲಿ ವಿಧಿವಿಶರಾದರು. ಅವರು ಕೈಗೊಂಡ ಸರಣಿ ಉಪದೇಶ ಮಾಲೆಗಳ ಹೆಸರು ಕೆಳಗಿನವುಗಳಲ್ಲಿ ಯಾವುದು ? | |
| (1) | ಕಡ್ವೆ ಪ್ರವಚನ | |
| (2) | ಏರಿಕೆಯ ಧ್ವನಿ | |
| (3) | ಕಡವೆ ಶಬ್ದ | |
| (4) | ರಿಷಭ್ ಸಂದೇಶ | |
ಸರಿ ಉತ್ತರ
(1) ಕಡ್ವೆ ಪ್ರವಚನ
| 56. | ಅಲಾಸ್ಟೈರ್ ಕುಕ ಬಗ್ಗೆ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: | |
| A. | ಓವಲ್ ನಲ್ಲಿನ ಭಾರತದ ವಿರುದ್ಧದ 5 ನೇ ಮತ್ತು ಅಂತಿಮ ಟೆಸ್ಟ್ ಮ್ಯಾಚ್ ನ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ಇವರು ನಿವೃತ್ತರಾದರು. | |
| B. | 2018 ರ ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ ಪಂದ್ಯಗಳಿಗಾಗಿ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಟೀಂನ ಕ್ಯಾಪ್ಟನ್ ಆಗಿದ್ದರು. | |
| C. | ಇವನು ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಇಂಗ್ಲೆಂಡಿನವ. | |
| ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | ||
| (1) | A ಮಾತ್ರ | |
| (2) | A ಮತ್ತು B ಮಾತ್ರ | |
| (3) | A ಮತ್ತು C ಮಾತ್ರ | |
| (4) | A, B ಮತ್ತು C | |
ಸರಿ ಉತ್ತರ
(3) A ಮತ್ತು C ಮಾತ್ರ
| 57. | ರ್ಯಾಪಿಡ್ ಟ್ರೈಡೆಂಟ್ 2018 ಎಂದರೇನು ? | |
| (1) | ಇಂಗ್ಲೆಂಡಿನ ಫಾರ್ಮುಲಾ ವನ್ ನಡೆಸಿದ (ರೇಸ್) ಸ್ಪರ್ಧಾ ಕ್ರೀಡೆ | |
| (2) | ಸೆಪ್ಟಂಬರ್ 2018 ರಲ್ಲಿ ಅಂತರರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆಯನ್ನು ಸಂಯುಕ್ತ ರಾಷ್ಟ್ರ ಆಯೋಜಿಸಿದ್ದು | |
| (3) | ಸಂಯುಕ್ತ ರಾಷ್ಟ್ರ ದೊಂದಿಗೆ ಯುಕ್ರೇನ್ ನಡೆಸಿದ ಜಂಟಿ ಮಿಲಿಟರಿ ಕಾರ್ಯಾಚರಣೆ ಮತ್ತು ಇತರ ನ್ಯಾಟೋ ದೇಶಗಳ ಒಂದು ಸ್ಟ್ರಿಂಗ್ (ತಂತು) | |
| (4) | ಇರಾನ್ ಸರ್ಕಾರ ಮೊದಲು ಕೈಗೊಂಡ ನ್ಯೂಕ್ಲಿಯರೀ ಕರಣದ ಬೃಹತ್ ಕಾರ್ಯಕ್ರಮ | |
ಸರಿ ಉತ್ತರ
(3) ಸಂಯುಕ್ತ ರಾಷ್ಟ್ರ ದೊಂದಿಗೆ ಯುಕ್ರೇನ್ ನಡೆಸಿದ ಜಂಟಿ ಮಿಲಿಟರಿ ಕಾರ್ಯಾಚರಣೆ ಮತ್ತು ಇತರ ನ್ಯಾಟೋ ದೇಶಗಳ ಒಂದು ಸ್ಟ್ರಿಂಗ್ (ತಂತು)
| 58. | ಇತ್ತೀಚೆಗೆ ತೀರಿಕೊಂಡ ಗುರುದಾಸ್ ಕಾಮತ್ ಅವರು ತಮ್ಮನ್ನು ಯಾವ ಪಕ್ಷದೊಂದಿಗೆ ಗುರುತಿಸಿ ಕೊಂಡಿದ್ದರು ? | |
| (1) | ಭಾರತ ರಾಷ್ಟ್ರೀಯ ಕಾಂಗ್ರೆಸ್ (ಐ.ಎನ್.ಸಿ.) | |
| (2) | ಭಾರತೀಯ ಕಮ್ಯೂನಿಸ್ಟ್ ಪಕ್ಷ | |
| (3) | ಭಾರತೀಯ ಜನತಾ ಪಕ್ಷ | |
| (4) | ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕಿಸ್ಟ್ ) | |
ಸರಿ ಉತ್ತರ
(1) ಭಾರತ ರಾಷ್ಟ್ರೀಯ ಕಾಂಗ್ರೆಸ್ (ಐ.ಎನ್.ಸಿ.)
| 59. | ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
| A. | ಡಾ. ಅರಿಫ್ ಅಲ್ವಿಯವರು ಪಾಕಿಸ್ತಾನದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. | |
| B. | ಅವರು ಮಮ್ನೂನ್ ಹುಸೇನ್ಗಿಂತ ಮುಂದಿರುವವರು. | |
| C. | ಅವರು ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸ್ಥಾಪಕ ಸದಸ್ಯರು. | |
| ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | ||
| (1) | A ಮಾತ್ರ | |
| (2) | A ಮತ್ತು C ಮಾತ್ರ | |
| (3) | B ಮತ್ತು C ಮಾತ್ರ | |
| (4) | A, B ಮತ್ತು C | |
ಸರಿ ಉತ್ತರ
(4) A, B ಮತ್ತು C
| 60. | ಈ ಹೇಳಿಕೆಗಳನ್ನು ಪರಿಗಶಿಸಿ : | |
| A. | ಭಾರತವು 2018 ರ ಏಷ್ಯನ್ ಕ್ರೀಡೆಗಳ ಪಂದ್ಯಮಕ್ತಾಯದಲ್ಲಿ ಅತ್ಯಧಿಕ 69 ಪದಕ ಗಳೊಂದಿಗೆ ಪೊರೈಸಿತು. | |
| B. | ರಾಣಿ, ರಾಮ್ ಪಾಲರು, ಭಾರತೀಯ ಮಹಿಳಾ ಹಾಕಿ ಕ್ಯಾಪ್ಟಿನ್, 2018 ರ 18 ನೇ ಏಷ್ಯನ್ ಕ್ರೀಡೆಗಳ ಸಮಾರೋಪ ಸಮಾರಂಭದಲ್ಲಿ ಭಾರತೀಯ ಧ್ವಜ ಹೊತ್ತವರು. | |
| ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | ||
| (1) | A ಮಾತ್ರ | |
| (2) | B ಮಾತ್ರ | |
| (3) | A ಮತ್ತು B ಇವೆರಡೂ | |
| (4) | A ಆಗಲೀ ಅಥವಾ B ಆಗಲೀ ಅಲ್ಲ | |
ಸರಿ ಉತ್ತರ
(3) A ಮತ್ತು B ಇವೆರಡೂ
| 61. | 2011 ರ ಜನಗಣತಿಯ ಮೇರೆಗೆ, ಈ ಕೆಳಗಿನ ಕೇಂದ್ರಾಡಳಿತ ಪ್ರದೇಶದಲ್ಲಿ ಕನಿಷ್ಠ ಜನಸಂಖ್ಯೆಯನ್ನು ಹೊಂದಿರುವಂತಹುದು ಯಾವುದು ? | |
| (1) | ದಾಮನ್ ಮತ್ತು ಡಿಯು | |
| (2) | ದಾದ್ರಾ ಮತ್ತು ನಗರ್ ಹವೇಲಿ | |
| (3) | ಲಕ್ಷದ್ವೀಪ್ | |
| (4) | ಪುದುಚೇರಿ | |
ಸರಿ ಉತ್ತರ
(3) ಲಕ್ಷದ್ವೀಪ್
| 62. | ಅಂತರರಾಷ್ಟ್ರೀಯ ದಿನಾಂಕ ರೇಖೆಯು ಒಂದು ಕಾಲ್ಪನಿಕ ರೇಖೆಯಾಗಿದ್ದು, ಬೇರಿಂಗ್ ಜಲಸಂಧಿಯ ಮೂಲಕ ಹಾದು ಹೋಗುವುದು, ಸಾಮಾನ್ಯವಾಗಿ ಈ ಕೆಳಗಿನ ಮೆರಿಡಿಯನ್ ನ್ನು (ಖಗೋಳ ಮಧ್ಯಾಹ್ನ ರೇಖೆ) ಅನುಸರಿಸುವುದು | |
| (1) | 0° | |
| (2) | 180° | |
| (3) | 90° | |
| (4) | 60° | |
ಸರಿ ಉತ್ತರ
(2) 180°
| 63. | ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿ ಹೊಂದಿಕೆಯಾಗಿದೆ ? | |
| A. | ಪಿಗ್ಮೀಸ್ - ಕಾಂಗೊ ಕಣಿವೆ | |
| B. | ಲ್ಯಾಪ್ಸ್ - ನಾರ್ವೆ | |
| C. | ಕಿರ್ಗಿಝ್ - ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | ||
| (1) | A ಮಾತ್ರ | |
| (2) | A ಮತ್ತು B ಮಾತ್ರ | |
| (3) | C ಮಾತ್ರ | |
| (4) | A, B ಮತ್ತು C | |
ಸರಿ ಉತ್ತರ
(3) C ಮಾತ್ರ
| 64. | ಭಾರತದ ಸಹಕಾರಿ ಸಂಸ್ಥೆಗಳಲ್ಲಿ ಕೆಳಗಿನ ಯಾವುದು ರಸ ಗೊಬ್ಬರಗಳ ಉತ್ಪಾದನೆಗೆ ಹೊಣೆಯಾಗಿದೆ ? | |
| (1) | NAFED | |
| (2) | IFFCO | |
| (3) | NCPC | |
| (4) | TRIFED | |
ಸರಿ ಉತ್ತರ
(2) IFFCO
| 65. | ರಾಜ್ಯಸಭೆಯು ಹಣಕಾಸಿನ ಮಸೂದೆಯನ್ನು ಲೋಕಸಭೆಯ ಪರಿಗಣನೆಗಾಗಿ ಕಳುಹಿಸಿದ ನಂತರ, ವಿಳಂಬ (ಮುಂದೂಡು) ಮಾಡಬಹುದಾದ ಗರಿಷ್ಠ ದಿನಗಳವರೆಗಿನ ಅವಧಿ | |
| (1) | 21 ದಿನಗಳು | |
| (2) | ಒಂದು ತಿಂಗಳು | |
| (3) | 7 ದಿನಗಳು | |
| (4) | 14 ದಿನಗಳು | |
ಸರಿ ಉತ್ತರ
(4) 14 ದಿನಗಳು
| 66. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : | |
| A. | ಮೊದಲನೇ ದುಂಡು ಮೇಜಿನ ಸಮಾವೇಶದಲ್ಲಿ ಮೊಹ್ಮದ್ ಅಲಿ ಜಿನ್ಹಾರವರು ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ಎಲೆಕ್ಟೋರೇಟ್ (ಚುನಾಯಕ ಸಮುದಾಯ) ಗಳಿಗಾಗಿ ಬೇಡಿಕೆಯನ್ನು ಮುಂದಿಟ್ಟರು. | |
| B. | ಎಲ್ಲಾ ದುಂಡು ಮೇಜಿನ ಸಮಾವೇಶಗಳಲ್ಲೂ ಕಾಂಗ್ರೆಸ್ ಭಾಗವಹಿಸಿತು. | |
| ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ? | ||
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
| (1) | A ಮಾತ್ರ | |
| (2) | B ಮಾತ್ರ | |
| (3) | A ಮತ್ತು B ಎರಡೂ | |
| (4) | A ಆಗಲೀ ಅಥವಾ B ಆಗಲೀ ಅಲ್ಲ | |
ಸರಿ ಉತ್ತರ
(4) A ಆಗಲೀ ಅಥವಾ B ಆಗಲೀ ಅಲ್ಲ
| 67. | ಭಾರತೀಯ ರಿಜರ್ವ್ ಬ್ಯಾಂಕು ಹಣ ಮೀಸಲು ಅನುಪಾತದಲ್ಲಿ ಹೆಚ್ಚಳವನ್ನು ಪ್ರಕಟಿಸಿತೆಂದರೆ ಅದು ಯಾವ ಅರ್ಥವನ್ನು ಸೂಚಿಸುತ್ತದೆ ? | |
| (1) | ವಾಣಿಜ್ಯ ಬ್ಯಾಂಕುಗಳು ಸಾಲವನ್ನು ನೀಡಲು ಕಡಿಮೆ ಹಣವನ್ನು ಹೊಂದುತ್ತವೆ. | |
| (2) | ಭಾರತದ ರಿಸರ್ವ ಬ್ಯಾಂಕ್ ಸಾಲವನ್ನು ನೀಡಲು ಕಡಿಮೆ ಹಣವನ್ನು ಹೊಂದುತ್ತದೆ. | |
| (3) | ಕೇಂದ್ರ ಸರ್ಕಾರವು ಸಾಲವನ್ನು ನೀಡಲು ಕಡಿಮೆ ಹಣವನ್ನು ಹೊಂದುವುದು. | |
| (4) | ಮೇಲಿನ ಯಾವುದೂ ಅಲ್ಲ | |
ಸರಿ ಉತ್ತರ
(1) ವಾಣಿಜ್ಯ ಬ್ಯಾಂಕುಗಳು ಸಾಲವನ್ನು ನೀಡಲು ಕಡಿಮೆ ಹಣವನ್ನು ಹೊಂದುತ್ತವೆ.
| 68. | ಎರಡು ಕ್ರಮಾನುಗತ ಅವಧಿಗಳಿಗೆ ಭಾರತದ ಉಪರಾಷ್ಟ್ರಪತಿಗಳಾಗಿ ಅಧಿಕಾರ ನಿರ್ವಹಿಸಿದವರು ಯಾರು ? | |
| (1) | ಡಾ. ರಾಧಾಕೃಷ್ಣನ್ | |
| (2) | ಶ್ರೀ ಆರ್. ವೆಂಕಟರಾಮನ್ | |
| (3) | ಡಾ. ಶಂಕರ ದಯಾಳ್ ಶರ್ಮಾ | |
| (4) | ಶ್ರೀ ವಿ.ವಿ. ಗಿರಿ | |
ಸರಿ ಉತ್ತರ
(1) ಡಾ. ರಾಧಾಕೃಷ್ಣನ್
| 69. | ಪಟ್ಟಿ I (ಕಾಗದ ಕೈಗಾರಿಕೆ) ಮತ್ತು ಪಟ್ಟಿ II (ರಾಜ್ಯ) ಗಳನ್ನು ಹೊಂದಿಸಿ : | |
| ಪಟ್ಟಿ I (ಕಾಗದ ಕೈಗಾರಿಕೆ) | ಪಟ್ಟಿ II (ರಾಜ್ಯ) | |||
| A. | ಕಾಂಪ್ಟಿ | I. | ಕರ್ನಾಟಕ | |
| B. | ರಾಜಮುಂಡ್ರಿ | II. | ಮಹಾರಾಷ್ಟ್ರ | |
| C. | ಶಾಹ್ಡೊಲ್ | III. | ಆಂಧ್ರ ಪ್ರದೇಶ | |
| D. | ಬೆಳಗೊಳ | IV. | ಮಧ್ಯ ಪ್ರದೇಶ | |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : | ||||
| A | B | C | D | ||
| (1) | I | III | IV | II | |
| (2) | II | III | IV | I | |
| (3) | II | III | I | IV | |
| (4) | II | IV | III | I |
ಸರಿ ಉತ್ತರ
(2) II III IV I
| 70. | ಈ ಹೇಳಿಕೆಗಳನ್ನು ಪರಿಗಶಿಸಿ : | |
| A. | ಯೋಜನಾ ಆಯೋಗದಂತಲ್ಲದೆ ರಾಜ್ಯಗಳು ಮತ್ತು ಸಚಿವ ಖಾತೆಗಳಿಗೆ ನೀತಿ ಆಯೋಗವೂ ನಿಧಿ ಹಂಚಿಕೆ ಮಾಡಲು ಅಧಿಕಾರ ಹೊಂದಿಲ್ಲ. | |
| B. | ಈ ನಿಧಿ ಹಂಚಿಕೆಯ ಕಾರ್ಯಗಳು ಹಣಕಾಸು ಮಂತ್ರಿಮಂಡಲದಿಂದ ನೆರವೇರಿಸಲ್ಪಡುವುದು. | |
| ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? | ||
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | ||
| (1) | A ಮಾತ್ರ | |
| (2) | B ಮಾತ್ರ | |
| (3) | A ಮತ್ತು B ಎರಡೂ | |
| (4) | A ಆಗಲೀ ಅಥವಾ B ಆಗಲೀ ಅಲ್ಲ | |
ಸರಿ ಉತ್ತರ
(3) A ಮತ್ತು B ಎರಡೂ
| 71. | ಯಾವ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ವರಾಜ್ ಪಕ್ಷವು ರೂಪುಗೊಂಡಿತು ? | |
| (1) | ಬೆಳಗಾಂ | |
| (2) | ಗಯಾ | |
| (3) | ಕಲ್ಕತ್ತಾ | |
| (4) | ಲಾಹೋರ್ | |
ಸರಿ ಉತ್ತರ
(2) ಗಯಾ
| 72. | ಪಟ್ಟಿ I (ಪಂಗಡಗಳು) ಮತ್ತು ಪಟ್ಟಿ II (ರಾಜ್ಯ) ಗಳನ್ನು ಹೊಂದಿಸಿ: | |
| ಪಟ್ಟಿ I (ಪಂಗಡಗಳು) | ಪಟ್ಟಿ II (ರಾಜ್ಯ) | |||
| A. | ಖಾಸಿಸ್ | I. | ಮೇಘಾಲಯ | |
| B. | ಗರೋಸ್ | II. | ಮಧ್ಯ ಪ್ರದೇಶ | |
| C. | ಗೊಂಡ್ | III. | ನಾಗಾಲ್ಯಾಂಡ್ | |
| D. | ಬಾರ್ಡಾ | IV. | ಗುಜರಾತ್ | |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : | ||||
| A | B | C | D | ||
| (1) | I | III | II | IV | |
| (2) | I | II | III | IV | |
| (3) | II | I | III | IV | |
| (4) | II | IV | I | III |
ಸರಿ ಉತ್ತರ
(1) I III II IV
| 73. | MSME ಯ ಹೊಸ ವ್ಯಾಖ್ಯೆಯ ಮೇರೆಗೆ ಒಂದು ಉತ್ಪಾದನಾ ಘಟಕದ ಉದ್ಯಮವನ್ನು ಸಣ್ಣ ಉದ್ಯಮವೆಂದು ಕರೆಯಬೇಕಾದಲ್ಲಿ | |
| (1) | ಅದರ ವಾರ್ಷಿಕ ವಹಿವಾಟು 5 ಕೋಟಿ ರೂ. ಗಳಿಗಿಂತಲೂ ಕಡಿಮೆ ಇರಬೇಕು | |
| (2) | ಆದರ ವಾರ್ಷಿಕ ವಹಿವಾಟು 75 ಕೋಟಿ ರೂ.ನಿಂದ 250 ಕೋಟಿ ರೂ.ಗಳ ನಡುವೆ ಇರಬೇಕು | |
| (3) | ಅದರ ವಾರ್ಷಿಕ ವಹಿವಾಟು 5 ಕೋಟಿ ರೂ. ಗಳಿಂದ 75 ಕೋಟಿ ರೂ.ಗಳ ನಡುವೆ ಇರಬೇಕು | |
| (4) | ಅದರ ವಾರ್ಷಿಕ ವಹಿವಾಟು 10 ಕೋಟಿ ರೂ.ಗಳಿಂದ 50 ಕೋಟಿ ರೂ.ಗಳ ನಡುವೆ ಇರಬೇಕು | |
ಸರಿ ಉತ್ತರ
(3) ಅದರ ವಾರ್ಷಿಕ ವಹಿವಾಟು 5 ಕೋಟಿ ರೂ. ಗಳಿಂದ 75 ಕೋಟಿ ರೂ.ಗಳ ನಡುವೆ ಇರಬೇಕು
| 74. | 2011-12ರ ನಂತರ, ಭಾರತದ ಜಿ.ಡಿ.ಪಿ.ಯ ಶೇಕಡಾವಾರಿನಲ್ಲಿ ಭಾರತ ಸರ್ಕಾರವು ಶಿಕ್ಷಣದ ಮೇಲೆ ಮಾಡುವ ವೆಚ್ಚವನ್ನು ಆರೋಗ್ಯ ಮೇಲಿನ ವೆಚ್ಚಕ್ಕೆ ಹೋಲಿಸಿದಾಗ, ಶಿಕ್ಷಣದ ವೆಚ್ಚವು | |
| (1) | ಅಧಿಕ | |
| (2) | ಕಡಿಮೆ | |
| (3) | ಒಂದೇರೀತಿಯಲ್ಲಿದೆ | |
| (4) | ಆರಂಭದಲ್ಲಿ ಕಡಿಮೆ ಮತ್ತು ಪ್ರಸ್ತುತ ಒಂದೇ ರೀತಿಯಲ್ಲಿದೆ | |
ಸರಿ ಉತ್ತರ
(1) ಅಧಿಕ
| 75. | ಎಲ್ಲಾ ಸೇವೆಗಳ ಮೇಲೆ ಯಾವ ಸೆಸ್ ನ್ನು (ತೆರಿಗೆ) ಶೇ. 0.5 ಆಗಿ (ತೆರಿಗೆ) ವಸೂಲಿ ಮಾಡಲಾಗುತ್ತದೆ ? | |
| A. | ಸ್ವಚ್ಛ್ ಭಾರತ್ | |
| B. | ಕೃಷಿ ಕಲ್ಯಾಣ್ | |
| C. | ಕೌಶಲ್ ವಿಕಾಸ್ | |
| ಈ ಮೇಲಿನವು ಗಳಲ್ಲಿ ಯಾವುವು ಸರಿ ? | ||
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | ||
| (1) | A ಮಾತ್ರ | |
| (2) | B ಮಾತ್ರ | |
| (3) | A ಮತ್ತು B ಮಾತ್ರ | |
| (4) | A, B ಮತ್ತು C | |
ಸರಿ ಉತ್ತರ
(3) A ಮತ್ತು B ಮಾತ್ರ
| 76. | ಪಟ್ಟಿ I ಮತ್ತು ಪಟ್ಟಿ I ಗಳನ್ನು ಹೊಂದಿಸಿ : | |
| ಪಟ್ಟಿ I | ಪಟ್ಟಿ II | |||
| A. | ಆಲೂಗಡ್ಡೆ | I. | ಬೇರು ಮಾರ್ಪಾಡು | |
| B. | ಗೆಣಸು | II. | ಹೂ ಮಾರ್ಪಾಡು | |
| C. | ಕಾಕ್ಟಸ್ ನ ಮುಖ್ಯ ಕಾಯ | III. | ಭೂಮಿ ಅಡಿಯ ಕಾಂಡ ಮಾರ್ಪಾಡು | |
| D. | ನೆಪೆಂತಿಸ್ | IV. | ಕಾಂಡ ಮಾರ್ಪಾಡು | |
| V. | ಎಲೆ ಮಾರ್ಪಾಡು | |||
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : | ||||
| A | B | C | D | ||
| (1) | III | I | IV | V | |
| (2) | V | III | I | II | |
| (3) | V | II | I | III | |
| (4) | IV | I | II | V |
ಸರಿ ಉತ್ತರ
(1) III I IV V
| 77. | ಸೂರ್ಯನಿಂದ ಇರುವ ದೂರದ ಆಧಾರದ ಮೇಲೆ ಈ ಗ್ರಹಗಳ ಏರಿಕೆ ಕ್ರಮ | |
| A. | ಶುಕ್ರ | |
| B. | ಮಂಗಳ | |
| C. | ಶನಿ | |
| D. | ಗುರು ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: | |
| (1) | B, A, D, C | |
| (2) | A, B, D, C | |
| (3) | A, B, C, D | |
| (4) | B, A, C, D | |
ಸರಿ ಉತ್ತರ
(2) A, B, D, C
| 78. | ಭೂಮಿಯ ಮೇಲೆ ಒಂದು ಬಲ ವರ್ತಿಸುತ್ತಿದೆ ಮತ್ತು ಅದು ಸೂರ್ಯನೆಡೆಗೆ ನಿರ್ದೇಶಿತವಾಗಿದೆ ಎಂಬುದನ್ನು ತೋರಿಸಲು ಈ ಪೈಕಿ ಯಾವುದು ಸಾಕ್ಷಿಯಾಗಿದೆ ? | |
| (1) | ಬೀಳುವ ಕಾಯಗಳ ದಿಕ್ಕು ಭೂಮಿಯೆಡೆಗೆ ಇರುವುದು | |
| (2) | ಸೂರ್ಯನ ಸುತ್ತ ಭೂಮಿ ಸುತ್ತುವುದು | |
| (3) | ಹಗಲು ರಾತ್ರಿಗಳ ವಿದ್ಯಮಾನ | |
| (4) | ವಿಕಸಿಸುತ್ತಿರುವ ವಿಶ್ವ | |
ಸರಿ ಉತ್ತರ
(2) ಸೂರ್ಯನ ಸುತ್ತ ಭೂಮಿ ಸುತ್ತುವುದು
| 79. | ಡೆಲ್ಟಾ ಫೋರ್ಸ್ ಎಂಬುದು ವಿದ್ರೋಹಿ ವಿರೋಧಿ (ಪ್ರತಿರಕ್ಷಾ) ದಳವಾಗಿದ್ದು, ಇದು ಕೆಳಗಿನ ಯಾವ ಭಾರತೀಯ ಸೇನಾ ವಿಭಾಗದಲ್ಲಿದೆ ? | |
| (1) | ಭಾರತೀಯ ಸೇನೆ (ಕಾಲ್ದಳ) | |
| (2) | ಭಾರತೀಯ ವಾಯುದಳ | |
| (3) | ಭಾರತೀಯ ನೌಕಾದಳ | |
| (4) | ಎಲ್ಲಾ ಮೂರು ದಳಗಳೂ ಡೆಲ್ಟಾ ಫೋರ್ಸ್ ನ್ನು ಹೊಂದಿವೆ | |
ಸರಿ ಉತ್ತರ
(1) ಭಾರತೀಯ ಸೇನೆ (ಕಾಲ್ದಳ)
| 80. | 2018 ರ 11 ನೇ ಸೆಪ್ಟೆಂಬರ್ ರಂದು ಭಾರತ, ಆಫ್ಘಾನಿಸ್ತಾನ ಮತ್ತು ಇರಾನ್ ಗಳ ನಡುವಣ ಮೊದಲ ಬಾರಿಗೆ ತ್ರಿಪಕ್ಷೀಯ ಸಭೆಯು ಈ ಕೆಳಗಿನ ಯಾವ ನಗರದಲ್ಲಿ ಜರುಗಿತು ? | |
| (1) | ನವ ದೆಹಲಿ | |
| (2) | ಕಾಬುಲ್ | |
| (3) | ಟೆಹರಾನ್ | |
| (4) | ಷಿರಾಝ್ | |
ಸರಿ ಉತ್ತರ
(2) ಕಾಬುಲ್
| 81. | ಅಂತರರಾಷ್ಟ್ರೀಯ ಸಾಕ್ಷರತಾ ದಿನ 2018 ನ್ನು ಪ್ರತಿವರ್ಷವೂ ಸೆಪ್ಟೆಂಬರ್ 8 ರಂದು ಆಚರಿಸಲಾಗುತ್ತಿದ್ದು ಇದರ ಆಶಯ ವೇನು? | |
| (1) | ಡಿಜಿಟಲ್ ಸಾಕ್ಷರತೆ | |
| (2) | ನಾವು ಇದನ್ನು ಶತಾಬ್ದಿ ಯಾಗಿ ಆಚರಿಸೋಣ | |
| (3) | ಸಾಕ್ಷರತೆ ಮತ್ತು ಕೌಶಲ್ಯ ಅಭಿವೃದ್ಧಿ | |
| (4) | ಭವಿಷ್ಯ ಬರೆಯುವುದು | |
ಸರಿ ಉತ್ತರ
(3) ಸಾಕ್ಷರತೆ ಮತ್ತು ಕೌಶಲ್ಯ ಅಭಿವೃದ್ಧಿ
| 82. | US ಓಪನ್ ಲಾನ್ ಟೆನಿಸ್ 2018 ರ ಪುರುಷರ ಸಿಂಗಲ್ಸ್ ಗೆದ್ದವರಾರು ? | |
| (1) | ನೊವೆಕ್ ಜೊಕೊವಿಚ್ | |
| (2) | ರೋಜರ್ ಫೆಡರರ್ | |
| (3) | ರಾಫೆಲ್ ನಡಾಲ್ | |
| (4) | ಕೀ ನಿಶಿಕೋರಿ | |
ಸರಿ ಉತ್ತರ
(1) ನೊವೆಕ್ ಜೊಕೊವಿಚ್
| 83. | ಒರಿಸ್ಸಾ ಅಸೆಂಬ್ಲಿಯು ರಾಜ್ಯದಲ್ಲಿ ವಿಧಾನ ಪರಿಷತ್ತನ್ನು ಸ್ಥಾಪಿಸಲಿಕ್ಕಾಗಿ ಇತ್ತೀಚೆಗೆ ಒಂದು ಠರಾವನ್ನು ಹೊರಡಿಸಿದ್ದು ಸಂವಿಧಾನದ ಯಾವ ಕಲಮಿನಡಿ ಠರಾವನ್ನು ಹೊರಡಿಸಿತು ? | |
| (1) | 169 ನೇ ಕಲಮು | |
| (2) | 170 ನೇ ಕಲಮು | |
| (3) | 171 ನೇ ಕಲಮು | |
| (4) | 172 ನೇ ಕಲಮು | |
ಸರಿ ಉತ್ತರ
(1) 169 ನೇ ಕಲಮು
| 84. | ಪಟ್ಟಿ I ರಲ್ಲಿನ (ಮರುಭೂಮಿ) ಪಟ್ಟಿ II ರಲ್ಲಿರುವ (ನೆಲೆ) ಗಳೊಂದಿಗೆ ಹೊಂದಿಸಿ : | |
| ಪಟ್ಟಿ I (ಮರುಭೂಮಿ) | ಪಟ್ಟಿ II (ನೆಲೆ) | |||
| A. | ಚಿಹುಹ್ವಾನ್ ಮರುಭೂಮಿ | I. | ಆಫ್ರಿಕಾ | |
| B. | ಗಿಬ್ಸನ್ ಮರುಭೂಮಿ | II. | ಪಶ್ಚಿಮ ಆಸ್ಟ್ರೇಲಿಯಾ | |
| C. | ಥಾರ್ ಮರುಭೂಮಿ | III. | ಉತ್ತರ ಅಮೇರಿಕಾ | |
| D. | ಕಲಹರಿ ಮರುಭೂಮಿ | IV. | ಭಾರತ | |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : | ||||
| A | B | C | D | ||
| (1) | II | IV | I | III | |
| (2) | III | II | IV | I | |
| (3) | IV | I | III | II | |
| (4) | I | III | II | IV |
ಸರಿ ಉತ್ತರ
(2) III II IV I
| 85. | ವೆಂಗಿ ಚಾಳುಕ್ಯರ ಮನೆತನದ ಸ್ಥಾಪಕರು ಕೆಳಕಂಡವರಲ್ಲಿ ಯಾರು? | |
| (1) | ಜಯಸಿಂಹ I | |
| (2) | ಇಂದ್ರಭಟ್ಟಾರಕ | |
| (3) | ವಿಷ್ಣುವರ್ಧನ | |
| (4) | ಕೊಕ್ಕಿಲಾ | |
ಸರಿ ಉತ್ತರ
(3) ವಿಷ್ಣುವರ್ಧನ
| 86. | ಕೆಳಗಿನ ಜೋಡಿಗಳಲ್ಲಿ ಯಾವುದು/ವು ಸರಿಯಾಗಿಲ್ಲ ? | |
| A. | ನೆಹರೂ ವರದಿ – 1928 | |
| B. | ಪೂರ್ಣ ಸ್ವರಾಜ್ – 1929 | |
| C. | ದಂಡಿ ಮಾರ್ಚ್ ಪ್ರಾರಂಭ – 1930 | |
| D. | ಗಾಂಧಿ ಇರ್ವಿನ್ ಒಪ್ಪಂದ – 1934 | |
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : | ||
| (1) | C ಮತ್ತು D | |
| (2) | A ಮತ್ತು D | |
| (3) | A ಮತ್ತು C | |
| (4) | D ಮಾತ್ರ | |
ಸರಿ ಉತ್ತರ
(4) D ಮಾತ್ರ
| 87. | ಕದಂಬ ರಾಜ್ಯದ ಸ್ಥಾಪಕ ಯಾರು ಮತ್ತು ಇವರ ಮುಖ್ಯ ರಾಜಧಾನಿ ನಗರ ಯಾವುದು ? | |
| (1) | ಮಯೂರವರ್ಮ ಮತ್ತು ಬನವಾಸಿ | |
| (2) | ಕಾಕುಸ್ಥಾವರ್ಮ ಮತ್ತು ಹಲ್ಮಿಡಿ | |
| (3) | ಶಾಂತಿವರ್ಮ ಮತ್ತು ಹಾನಗಲ್ | |
| (4) | ಮೃಗೇಶವರ್ಮ ಮತ್ತು ಗೋವಾ | |
ಸರಿ ಉತ್ತರ
(1) ಮಯೂರವರ್ಮ ಮತ್ತು ಬನವಾಸಿ
| 88. | ಒಬ್ಬ ವ್ಯಕ್ತಿಯು ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಕೂಲಿದರಕ್ಕೆ ಕೆಲಸ ಮಾಡಲು ಸಿದ್ಧನಿದ್ದು, ಆದರೆ ಆತನಿಗೆ ಕೆಲಸ ದೊರೆಯುತ್ತಿಲ್ಲ (ಕೆಲಸವನ್ನು ದೊರಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ) ಎಂದಾಗ ಆ ರೀತಿಯ ನಿರುದ್ಯೋಗವನ್ನು ಏನೆಂದು ಕರೆಯುತ್ತಾರೆ ? | |
| (1) | ಸ್ವಯಂ ನಿರುದ್ಯೋಗ | |
| (2) | ಸ್ವಯಮೇತರ ನಿರುದ್ಯೋಗ | |
| (3) | ಋತುಮಾನೀಯ ನಿರುದ್ಯೋಗ | |
| (4) | ಮೇಲಿನ ಯಾವುದೂ ಅಲ್ಲ | |
ಸರಿ ಉತ್ತರ
(2) ಸ್ವಯಮೇತರ ನಿರುದ್ಯೋಗ
| 89. | ಕೈಗಾರಿಕಾ ಉತ್ಪನ್ನ ಸೂಚ್ಯಂಕ (IIP) ವನ್ನು ಈ ಕೆಳಗಿನ ಯಾವ ವಲಯಕ್ಕಾಗಿ ಲೆಕ್ಕ ಮಾಡಲಾಗದು ? | |
| (1) | ಕಲ್ಲಿದ್ದಲು ವಲಯ | |
| (2) | ಸಂಸ್ಕರಣಾ ಉತ್ಪನ್ನಗಳ | |
| (3) | ಕೃಷಿ ವಲಯ | |
| (4) | ಉಕ್ಕು ವಲಯ | |
ಸರಿ ಉತ್ತರ
(3) ಕೃಷಿ ವಲಯ
| 90. | ಆರ್ಥಿಕತೆಯಲ್ಲಿ ಅಧಿಕ ಹಣದುಬ್ಬರ ಇದ್ದಾಗ ಆರ್ಥಿಕತೆಯಲ್ಲಿ ಹಣದ ಪೂರೈಕೆ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ? | |
| (1) | ಹಣಪೂರೈಕೆ ಮೇಲೆ ಪರಿಣಾಮವಿಲ್ಲ | |
| (2) | ಹಣಪೂರೈಕೆ ಕಡಿತ ಗೊಳ್ಳುತ್ತದೆ | |
| (3) | ಹಣ ಪೂರೈಕೆ ಅಧಿಕ ಗೊಳ್ಳುತ್ತದೆ | |
| (4) | ಈ ಮೇಲಿನ ಯಾವುದೂ ಅಲ್ಲ | |
ಸರಿ ಉತ್ತರ
(3) ಹಣ ಪೂರೈಕೆ ಅಧಿಕ ಗೊಳ್ಳುತ್ತದೆ
| 91. | ಕೆಳಗಿನ ಯಾವ ಯೋಜನೆಗಳು ಮುಂದಿನ ಮೂರು ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಕೌಶಲ ಕಲಿಸುವ ಉದ್ದೇಶವನ್ನು ಹೊಂದಿದೆ ? | |
| (1) | ಸ್ಟಾರ್ಟ್ಅಪ್, ಸ್ಟಾಂಡ್ ಅಪ್ | |
| (2) | ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನಾ | |
| (3) | MNREGA | |
| (4) | ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನಾ | |
ಸರಿ ಉತ್ತರ
(2) ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನಾ
| 92. | ರೆಪೋ ದರ ಮತ್ತು ವಿಪರ್ಯಯ ರೆಪೋ ದರಗಳು ಇದರ ಭಾಗವಾಗಿವೆ | |
| (1) | (ಆರ್ಥಿಕ) ಹಣಕಾಸಿನ ನೀತಿ | |
| (2) | ವಿತ್ತೀಯ ನೀತಿ | |
| (3) | ಹೂಡಿಕೆ ನೀತಿ | |
| (4) | ಎಫ್.ಡಿ.ಐ. ನೀತಿ | |
ಸರಿ ಉತ್ತರ
(2) ವಿತ್ತೀಯ ನೀತಿ
| 93. | ಆಯುಷ್ಮಾನ್ ಭಾರತ ಕಾರ್ಯಕ್ರಮವು ಈ ಕೆಳಗಿನ ಯಾವ ವಲಯಕ್ಕೆ ಸಂಬಂಧಿಸಿದೆ ? | |
| (1) | ಮೂಲ ಸೌಕರ್ಯ | |
| (2) | ರೇಲ್ವೆ | |
| (3) | ಕೃಷಿ | |
| (4) | ಆರೋಗ್ಯ ಪಾಲನೆ | |
ಸರಿ ಉತ್ತರ
(4) ಆರೋಗ್ಯ ಪಾಲನೆ
| 94. | ಆರ್ಥಿಕ ವರ್ಷದಲ್ಲಿ ಆರ್.ಬಿ.ಐ. ತನ್ನ ವಿತ್ತೀಯ ನೀತಿಯನ್ನು ಎಷ್ಟು ಬಾರಿ ಮರುಪರಿಶೀಲಿಸುವುದು | |
| (1) | ಮಾಸಿಕವಾಗಿ | |
| (2) | ದ್ವೆಮಾಸಿಕವಾಗಿ | |
| (3) | ತ್ರೆಮಾಸಿಕವಾಗಿ | |
| (4) | ಅರ್ಧವಾರ್ಷಿಕವಾಗಿ | |
ಸರಿ ಉತ್ತರ
(2) ದ್ವೆಮಾಸಿಕವಾಗಿ
| 95. | ‘ಬಿಟ್ ಕಾಯಿನ್’ ನಾಣ್ಯವೆಂದರೆ | |
| (1) | ಅಂತರರಾಷ್ಟ್ರೀಯ ಲಿಕ್ವಿಡಿಟಿ ಅಧಿಕ ಗೊಳಿಸಲು ಐ.ಎಮ್.ಎಫ್. ರೂಪಿಸಿದ ಹಣ | |
| (2) | ಯೂರೋ ವಲಯ ಮುಗ್ಗಟ್ಟು ನಿರ್ವಹಿಸಲು ಯುರೋಪಿಯನ್ ಕೇಂದ್ರ ಬ್ಯಾಂಕ್ ರೂಪಿಸಿದ ಕರೆನ್ಸಿ | |
| (3) | ಯಾವುದಲ್ಲಿ ಬ್ಯಾಂಕು ಇಲ್ಲವೇ ಸರ್ಕಾರಕ್ಕೆ ಬದ್ಧವಲ್ಲದ ಡಿಜಿಟಲ್ ಕರೆನ್ಸಿ | |
| (4) | ಅಭಿವೃದ್ಧಿಶೀಲ ದೇಶಗಳಿಗೆ ನೀಡಲು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕು ರೂಪಿಸಿದ್ದು | |
ಸರಿ ಉತ್ತರ
(3) ಯಾವುದಲ್ಲಿ ಬ್ಯಾಂಕು ಇಲ್ಲವೇ ಸರ್ಕಾರಕ್ಕೆ ಬದ್ಧವಲ್ಲದ ಡಿಜಿಟಲ್ ಕರೆನ್ಸಿ
| 96. | ಫ್ಲಿಪ್ ಕಾರ್ಟ್ ನಲ್ಲಿಯ 77% ರಷ್ಟು ಏರಿಕೆಯನ್ನು ಯಾವ ಕಂಪನಿಯು ತೆಗೆದುಕೊಂಡಿದೆ ? | |
| (1) | ಅಮೆಜಾನ್ | |
| (2) | ವಾಲ್ ಮಾರ್ಟ್ | |
| (3) | ಫಾರ್ಚೂನ್ | |
| (4) | ವಾಲ್ ಗ್ರಿನ್ಸ್ | |
ಸರಿ ಉತ್ತರ
(2) ವಾಲ್ ಮಾರ್ಟ್
| 97. | ಗಗನ ಮಹಲ್ ಎಂಬುದು ಈ ಕೆಳಗಿನ ಯಾವ ಆಳ್ವಿಕೆಗಾರರಿಗೆ ಸಂಬಂಧಿಸಿದ ವಾಸ್ತುಶಿಲ್ಪ ವೈಭವವಾಗಿದೆ ? | |
| (1) | ಆದಿಲ್ ಷಾಹಿಗಳು | |
| (2) | ಕುತುಬ್ ಷಾಹಿಗಳು | |
| (3) | ನಿಜಾಮ್ ಷಾಹಿಗಳು | |
| (4) | ಬರೀದ್ ಷಾಹಿಗಳು | |
ಸರಿ ಉತ್ತರ
(1) ಆದಿಲ್ ಷಾಹಿಗಳು
| 98. | ಚಿಸ್ತಿ ಅವಧಿಯ ಯಾವ ಪ್ರಸಿದ್ಧ (ದಂತಕತೆಯ) ಸಂತರು ‘ಚಿರಾಗ್-ಇ-ಢೆಲ್ವಿ’ (ಚಿರಾಗ್ ಆಫ್ ಢೆಲ್ಲಿ) ಎಂದು ಖ್ಯಾತರಾಗಿದ್ದಾರೆ ? | |
| (1) | ನಿಜಾಮುದ್ದೀನ್ ಔಲಿಯಾ | |
| (2) | ಶೇಖ್ ನಾಸಿರುದ್ದೀನ್ ಮೊಹಮದ್ | |
| (3) | ಕುತುಬುದೀನ್ ಭಕ್ತಿಯಾರ್ ಕಾಕಿ | |
| (4) | ಮೇಲಿನ ಯಾರೂ ಅಲ್ಲ | |
ಸರಿ ಉತ್ತರ
(2) ಶೇಖ್ ನಾಸಿರುದ್ದೀನ್ ಮೊಹಮದ್
| 99. | ಈ ಕೆಳಗಿನ ಯಾವ ಗುಣಗಳಿಂದ ಫ್ಲೈಯಿಂಗ್ ವ್ಹೀಲ್ ಎಂಬುದು ಸ್ಟೀಂ (ಹಬೆ) ಎಂಜಿನ್ ನ ಮುಖ್ಯ ಭಾಗವಾಗಿರುವುದು ? | |
| (1) | ಇದು ಎಂಜಿನ್ ಗೆ ಸಾಮರ್ಥ್ಯವನ್ನು ನೀಡುತ್ತದೆ. | |
| (2) | ಇದು ಎಂಜಿನ್ ನ ವೇಗವನ್ನು ವರ್ಧಿಸುತ್ತದೆ. | |
| (3) | ಇದು ಎಂಜಿನ್, ಒಂದೇ ಸಮನಾದ ವೇಗವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. | |
| (4) | ಜಡತಾ ಮಹತ್ತ್ವವನ್ನು ಕುಂಠಿತ ಗೊಳಿಸುತ್ತದೆ. | |
ಸರಿ ಉತ್ತರ
(3) ಇದು ಎಂಜಿನ್, ಒಂದೇ ಸಮನಾದ ವೇಗವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
| 100. | ಕೆಳಗಿನವರಲ್ಲಿ ಯಾವ ಬೌದ್ಧ ತತ್ವಶಾಸಜ್ಞರು ಬೌದ್ಧ ಧರ್ಮವನ್ನು ಒಪ್ಪಿಕೊಳ್ಳುವಂತೆ ಇಂಡೋ-ಗ್ರೀಕ್ ರಾಜ ಮೆನೈಂಡರ್ ನನ್ನು ಮನವೊಲಿಸಿದರು ? | |
| (1) | ಆಸಂಗ | |
| (2) | ನಾಗಸೇನಾ | |
| (3) | ಧರ್ಮಕೀರ್ತಿ | |
| (4) | ಶ್ರುತಕೀರ್ತಿ | |
ಸರಿ ಉತ್ತರ
(2) ನಾಗಸೇನಾ
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ
0 Comments