ಪೊಲೀಸ್ ಕಾನ್ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ
| 1. | ಜನಪ್ರಿಯ ಕಾದಂಬರಿ ‘ಸಂಸ್ಕಾರ’ದ ಕರ್ತೃ | |
| (ಎ) | ಗಿರೀಶ್ ಕಾರ್ನಾಡ್ | |
| (ಬಿ) | ಎಸ್.ಎಲ್. ಭೈರಪ್ಪ | |
| (ಸಿ) | ಯು.ಆರ್. ಅನಂತಮೂರ್ತಿ | |
| (ಡಿ) | ಕುವೆಂಪು | |
CORRECT ANSWER
(ಸಿ) ಯು.ಆರ್. ಅನಂತಮೂರ್ತಿ
| 2. | ತಾಳಿಕೋಟೆ ಕದನದ ಮಹತ್ವವೇನೆಂದರೆ ಅದರಿಂದ | |
| (ಎ) | ಕೃಷ್ಣದೇವರಾಯನಿಗೆ ಜಯ ಲಭಿಸಿತು | |
| (ಬಿ) | ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು | |
| (ಸಿ) | ಪೋರ್ಚುಗೀಸರು ಕರ್ನಾಟಕ ಪ್ರವೇಶಿಸಿದರು | |
| (ಡಿ) | ದಖನ್ನಿನ ಸುಲ್ತಾನರಿಗೆ ಸೋಲಾಯಿತು | |
CORRECT ANSWER
(ಬಿ) ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣವಾಯಿ
| 3. | ಶರಾವತಿ ನದಿಯು ಯಾವ ಪಟ್ಟಣದ ಮೂಲಕ ಹರಿಯುತ್ತದೆ? | |
| (ಎ) | ಕಾರವಾರ | |
| (ಬಿ) | ದಾಂಡೇಲಿ | |
| (ಸಿ) | ಹೊನ್ನಾವರ | |
| (ಡಿ) | ಹಾವೇರಿ | |
CORRECT ANSWER
(ಸಿ) ಹೊನ್ನಾವರ
| 4. | 2011ನೇ ಸಾಲಿನ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಲಿಂಗಾನುಪಾತವು | |
| (ಎ) | 968 | |
| (ಬಿ) | 930 | |
| (ಸಿ) | 943 | |
| (ಡಿ) | 980 | |
CORRECT ANSWER
(ಎ) 968
| 5. | ರಾಜು ತನ್ನ ಮನೆಯಿಂದ ಹೊರಟು ಉತ್ತರ ದಿಕ್ಕಿಗೆ 5 ಕಿಲೋಮೀಟರ್ ನಡೆದನು. ಅಲ್ಲಿಂದ ದಿಕ್ಕನ್ನು ಬದಲಾಯಿಸಿ ಪೂರ್ವ ದಿಕ್ಕಿಗೆ 7 ಕಿಲೋಮೀಟರ್ ನಡೆದನು. ಅಲ್ಲಿಂದ ದಕ್ಷಿಣ ದಿಕ್ಕಿಗೆ 5 ಕಿಲೋ ಮೀಟರ್ ನಡೆದನು. ಹಾಗಾದರೆ ಅವನು ತನ್ನ ಮನೆಯಿಂದ ಎಷ್ಟು ದೂರದಲ್ಲಿದ್ದಾನೆ? | |
| (ಎ) | 5 ಕಿ.ಮೀ. | |
| (ಬಿ) | 6 ಕಿ.ಮೀ. | |
| (ಸಿ) | 7 ಕಿ.ಮೀ. | |
| (ಡಿ) | 8 ಕಿಮೀ. | |
CORRECT ANSWER
(ಸಿ) 7 ಕಿ.ಮೀ.
| 6. | ಉತ್ತರ ಪ್ರದೇಶದ ರಾಜಧಾನಿ ಯಾವುದು? | |
| (ಎ) | ಅಲಹಾಬಾದ್ | |
| (ಬಿ) | ವಾರಾಣಸಿ | |
| (ಸಿ) | ನೋಯಡಾ | |
| (ಡಿ) | ಲಕ್ನೋ | |
CORRECT ANSWER
(ಡಿ) ಲಕ್ನೋ
| 7. | ಇವುಗಳಲ್ಲಿ ಯಾವುದು ದ್ರಾವಿಡ ಭಾಷೆ ಅಲ್ಲ? | |
| (ಎ) | ತೆಲುಗು | |
| (ಬಿ) | ಮರಾಠಿ | |
| (ಸಿ) | ತುಳು | |
| (ಡಿ) | ಕನ್ನಡ | |
CORRECT ANSWER
(ಬಿ) ಮರಾಠಿ
| 8. | ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಾಫಿ ಬೆಳೆಯನ್ನು ಮುಖ್ಯವಾಗಿ ಬೆಳೆಯಲಾಗುತ್ತದೆ? | |
| (ಎ) | ಕೋಲಾರ | |
| (ಬಿ) | ಉಡುಪಿ | |
| (ಸಿ) | ಚಿಕ್ಕಮಗಳೂರು | |
| (ಡಿ) | ಬೆಳಗಾವಿ | |
CORRECT ANSWER
(ಸಿ) ಚಿಕ್ಕಮಗಳೂರು
| 9. | ‘ಶ್ವೇತ ಕ್ರಾಂತಿ’ಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? | |
| (ಎ) | ಮೊಟ್ಟೆ ಉತ್ಪಾದನೆ | |
| (ಬಿ) | ಪ್ಲಾಸ್ಟಿಕ್ ಉತ್ಪಾದನೆ | |
| (ಸಿ) | ಆಲೂಗೆಡ್ಡೆ ಉತ್ಪಾದನೆ | |
| (ಡಿ) | ಹಾಲು ಉತ್ಪಾದನೆ | |
CORRECT ANSWER
(ಡಿ) ಹಾಲು ಉತ್ಪಾದನೆ
| 10. | ‘‘ವಿಕ್ರಮಾರ್ಜುನ ವಿಜಯ’’ದ ಕರ್ತೃ | |
| (ಎ) | ರನ್ನ | |
| (ಬಿ) | ಪಂಪ | |
| (ಸಿ) | ದುರ್ಗಸಿಂಹ | |
| (ಡಿ) | ಬಸವಣ್ಣ | |
CORRECT ANSWER
(ಬಿ) ಪಂಪ
| 11. | ಭಾರತದ ಸುಪ್ರೀಂಕೋರ್ಟ್ನ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ | |
| (ಎ) | ನ್ಯಾ. ಜೆ.ಎಸ್. ಖೇಹರ್ | |
| (ಬಿ) | ನ್ಯಾ. ಭಾಸ್ಕರ್ ರಾವ್ | |
| (ಸಿ) | ನ್ಯಾ. ವಿಶ್ವನಾಥ್ ಶೆಟ್ಟಿ | |
| (ಡಿ) | ಮೇಲಿನ ಯಾರೂ ಅಲ್ಲ | |
CORRECT ANSWER
(ಎ) ನ್ಯಾ. ಜೆ.ಎಸ್. ಖೇಹರ್
| 12. | 2016ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ | |
| (ಎ) | ಶಂಖ ಘೋಷ್ | |
| (ಬಿ) | ರಾಮಚಂದ್ರ ಗುಹ | |
| (ಸಿ) | ಎಸ್.ಎಲ್. ಭೈರಪ್ಪ | |
| (ಡಿ) | ಕುಂ.ವೀರಭದ್ರಪ್ಪ | |
CORRECT ANSWER
(ಎ) ಶಂಖ ಘೋಷ್
| 13. | ಭಾರತದ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಯಾರು ಭಾಗವಹಿಸುತ್ತಾರೆ? | |
| (ಎ) | ಸಂಸತ್ತಿನ ಸದಸ್ಯರುಗಳು ಮಾತ್ರ | |
| (ಬಿ) | ವಿಧಾನ ಪರಿಷತ್ತಿನ ಮತ್ತು ವಿಧಾನಸಭಾ ಸದಸ್ಯರುಗಳು ಮಾತ್ರ | |
| (ಸಿ) | ರಾಜ್ಯಸಭಾ, ಲೋಕಸಭಾ ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳು ಮಾತ್ರ | |
| (ಡಿ) | ರಾಜ್ಯಸಭಾ, ಲೋಕಸಭಾ ಮತ್ತು ವಿಧಾನಸಭಾ ಸದಸ್ಯರುಗಳು | |
CORRECT ANSWER
(ಡಿ) ರಾಜ್ಯಸಭಾ, ಲೋಕಸಭಾ ಮತ್ತು ವಿಧಾನಸಭಾ ಸದಸ್ಯರುಗಳು
| 14. | ‘ಚಿಕ್ಕವೀರ ರಾಜೇಂದ್ರ’ ಕೃತಿಯ ಕರ್ತೃ ಯಾರು? | |
| (ಎ) | ಮಾಸ್ತಿ ವೆಂಕಟೇಶ ಅಯ್ಯಂಗಾರ್ | |
| (ಬಿ) | ಕುವೆಂಪು | |
| (ಸಿ) | ದ.ರಾ. ಬೇಂದ್ರೆ | |
| (ಡಿ) | ಅನಂತಮೂರ್ತಿ | |
CORRECT ANSWER
(ಎ) ಮಾಸ್ತಿ ವೆಂಕಟೇಶ ಅಯ್ಯಂಗಾರ್
| 15. | ನ್ಯೂಜಿಲ್ಯಾಂಡ್ ದೇಶದ ರಾಜಧಾನಿಯ ಹೆಸರು | |
| (ಎ) | ಪೋರ್ಟ್ ಮಾರ್ಸೆಬಿ | |
| (ಬಿ) | ಸಿಡ್ನಿ | |
| (ಸಿ) | ಅಡಿಲೇಡ್ | |
| (ಡಿ) | ವೆಲಿಂಗ್ಟನ್ | |
CORRECT ANSWER
(ಡಿ) ವೆಲಿಂಗ್ಟನ್
| 16. | ಶ್ರೀಹರಿಕೋಟಾ ಸ್ಥಳವು ಯಾವ ಕಾರಣಕ್ಕಾಗಿ ಪ್ರಸಿದ್ಧವಾಗಿದೆ? | |
| (ಎ) | ಕ್ರಿಕೆಟ್ ಕ್ರೀಡಾಂಗಣ | |
| (ಬಿ) | ಧಾರ್ಮಿಕ ಸ್ಥಳ | |
| (ಸಿ) | ಬಾಹ್ಯಾಕಾಶ ಕೇಂದ್ರ | |
| (ಡಿ) | ರಾಜಕೀಯ ಚಟುವಟಿಕೆಗಳಿಗೆ | |
CORRECT ANSWER
(ಸಿ) ಬಾಹ್ಯಾಕಾಶ ಕೇಂದ್ರ
| 17. | ಎಫ್ - 16 ಎಂಬುದು | |
| (ಎ) | ಯುದ್ಧ ವಿಮಾನ | |
| (ಬಿ) | ನೌಕಾನೆಲೆ | |
| (ಸಿ) | ಶಿಖರ | |
| (ಡಿ) | ಮೇಲಿನ ಯಾವುದೂ ಅಲ್ಲ | |
CORRECT ANSWER
(ಎ) ಯುದ್ಧ ವಿಮಾನ
| 18. | GST ಎಂದರೆ | |
| (ಎ) | Good and Services Tax | |
| (ಬಿ) | General Service Tax | |
| (ಸಿ) | Goods Sales Tax | |
| (ಡಿ) | ಮೇಲಿನ ಯಾವುದೂ ಅಲ್ಲ | |
CORRECT ANSWER
(ಎ) Good and Services Tax
| 19. | ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯನ್ನು ಈ ಕೆಳಗಿನ ಯಾವ ಉದ್ದೇಶಗಳಿಗಾಗಿ ಪ್ರಾರಂಭಿಸಲಾಗಿದೆ? | |
| (ಎ) | ಬಿ.ಪಿ.ಎಲ್. ಕುಟುಂಬಗಳಿಗೆ ಎಲ್.ಪಿ.ಜಿ. ಸಂಪರ್ಕ ಒದಗಿಸುವುದು | |
| (ಬಿ) | ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವುದು | |
| (ಸಿ) | ಹೆಣ್ಣು ಮಕ್ಕಳನ್ನು ಸೇನೆಗೆ ಸೇರಿಸಿಕೊಳ್ಳುವುದು | |
| (ಡಿ) | ನಗರಗಳ ಸೌಂದರ್ಯೀಕರಣ | |
CORRECT ANSWER
(ಎ) ಬಿ.ಪಿ.ಎಲ್. ಕುಟುಂಬಗಳಿಗೆ ಎಲ್.ಪಿ.ಜಿ. ಸಂಪರ್ಕ ಒದಗಿಸುವುದು
| 20. | ‘ಚಂಪಾರಣ್ಯ ಸತ್ಯಾಗ್ರಹ’ದ ನಾಯಕತ್ವ ವಹಿಸಿದ್ದವರು | |
| (ಎ) | ಸರ್ದಾರ್ ಪಟೇಲ್ | |
| (ಬಿ) | ಮಹಾತ್ಮ ಗಾಂಧಿ | |
| (ಸಿ) | ಜವಾಹರ್ಲಾಲ್ ನೆಹರೂ | |
| (ಡಿ) | ಲಾಲ್ ಬಹಾದ್ದೂರ್ ಶಾಸ್ತ್ರಿ | |
CORRECT ANSWER
(ಬಿ) ಮಹಾತ್ಮ ಗಾಂಧಿ
| 21. | ಈ ವಾದ್ಯವು ತಾಳ ವಾದ್ಯವಾಗಿದೆ | |
| (ಎ) | ಮೃದಂಗ | |
| (ಬಿ) | ತಂಬೂರಿ | |
| (ಸಿ) | ಪಿಟೀಲು | |
| (ಡಿ) | ವೀಣೆ | |
CORRECT ANSWER
(ಎ) ಮೃದಂಗ
| 22. | ಭಾರತೀಯ ಸರ್ವೋಚ್ಚ ನ್ಯಾಯಾಲಯದ ಕೇಂದ್ರ ಕಚೇರಿ ಇರುವುದು. | |
| (ಎ) | ನವದೆಹಲಿ | |
| (ಬಿ) | ಬೆಂಗಳೂರು | |
| (ಸಿ) | ಮುಂಬೈ | |
| (ಡಿ) | ಕೋಲ್ಕತಾ | |
CORRECT ANSWER
(ಎ) ನವದೆಹಲಿ
| 23. | ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರಾವಧಿ | |
| (ಎ) | 5 ವರ್ಷಗಳು | |
| (ಬಿ) | 6 ವರ್ಷಗಳು | |
| (ಸಿ) | 4 ವರ್ಷಗಳು | |
| (ಡಿ) | 3 ವರ್ಷಗಳು | |
CORRECT ANSWER
(ಬಿ) 6 ವರ್ಷಗಳು
| 24. | ಗ್ರಾಮೀಣ ಮಹಿಳೆಯರ ವಿಕಾಸಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ | |
| (ಎ) | ಲೋಕಾಯುಕ್ತ | |
| (ಬಿ) | ಸ್ತ್ರೀಶಕ್ತಿ | |
| (ಸಿ) | ಸಾಕ್ಷರ ಭಾರತ | |
| (ಡಿ) | ಕುಟುಂಬ ಕಲ್ಯಾಣ ಕಾರ್ಯಕ್ರಮ | |
CORRECT ANSWER
(ಬಿ) ಸ್ತ್ರೀಶಕ್ತಿ
| 25. | ‘ಮಾವಿನ ಹೊಯ್ಲು’ ಎಂಬ ಹೆಸರಿನ ಮಳೆ ಯಾವ ತಿಂಗಳಿನಲ್ಲಿ ಬರುತ್ತದೆ? | |
| (ಎ) | ಡಿಸೆಂಬರ್ | |
| (ಬಿ) | ಏಪ್ರಿಲ್ | |
| (ಸಿ) | ಜೂನ್ | |
| (ಡಿ) | ಸೆಪ್ಟೆ ಂಬರ್ | |
CORRECT ANSWER
(ಬಿ) ಏಪ್ರಿಲ್
| 26. | ವೈದ್ಯರೊಬ್ಬರು ಸರಿಯಾದ ಬೆಳವಣಿಗೆಯಾಗದ ಮೂಳೆಗಳುಳ್ಳ ಮಗುವನ್ನು ಬೆಳಗಿನ ಬಿಸಿಲಿನಲ್ಲಿ ಓಡಾಡಿಸಲು ಸಲಹೆ ಮಾಡುತ್ತಾರೆ. ಇದಕ್ಕೆ ಸಹಾಯಕವಾಗುವ ವಿಕಿರಣ. | |
| (ಎ) | ಕ್ಷ - ಕಿರಣ | |
| (ಬಿ) | ಅವಕೆಂಪು ಕಿರಣ | |
| (ಸಿ) | ನೇರಳಾತೀತ ಕಿರಣ | |
| (ಡಿ) | ಗಾಮಾ ಕಿರಣ | |
CORRECT ANSWER
(ಸಿ) ನೇರಳಾತೀತ ಕಿರಣ
| 27. | ಇಂಧನ ಉಳಿತಾಯಕ್ಕೆ ಈ ಕೆಳಗಿನ ಯಾವ ಅಭ್ಯಾಸ ಸೂಕ್ತವಲ್ಲ? | |
| (ಎ) | ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವುದು | |
| (ಬಿ) | ಸಣ್ಣ ದೂರವನ್ನು ಕ್ರಮಿಸಲು ಮೋಟಾರ್ ಸೈಕಲ್ ಅನ್ನು ಬಳಸುವುದು | |
| (ಸಿ) | ಸಣ್ಣ ದೂರವನ್ನು ಕ್ರಮಿಸಲು ಸೈಕಲ್ ಅನ್ನು ಬಳಸುವುದು | |
| (ಡಿ) | ಸಣ್ಣ ದೂರವನ್ನು ನಡೆದುಕೊಂಡು ಕ್ರಮಿಸುವುದು | |
CORRECT ANSWER
(ಬಿ) ಸಣ್ಣ ದೂರವನ್ನು ಕ್ರಮಿಸಲು ಮೋಟಾರ್ ಸೈಕಲ್ ಅನ್ನು ಬಳಸುವುದು
| 28. | ಕಾರ್ಬುರೇಟರ್ನ ಕಾರ್ಯವೆಂದರೆ | |
| (ಎ) | ಪೆಟ್ರೋಲನ್ನು ಮಾತ್ರ ಇಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ. | |
| (ಬಿ) | ಗಾಳಿಯನ್ನು ಮಾತ್ರ ಇಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ. | |
| (ಸಿ) | ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಇಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ. | |
| (ಡಿ) | ಡೀಸೆಲ್ ಮತ್ತು ಗಾಳಿಯ ಮಿಶ್ರಣವನ್ನು ಇಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ. | |
CORRECT ANSWER
(ಸಿ) ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಇಂಜಿನ್ಗೆ ಪ್ರವೇಶಿಸುವಂತೆ ಮಾಡುತ್ತದೆ.
| 29. | ಕರ್ಕಾಟಕ ಸಂಕ್ರಾಂತಿ ವೃತ್ತವು ಈ ರಾಜ್ಯದ ಮೂಲಕ ಹಾದು ಹೋಗುತ್ತದೆ. | |
| (ಎ) | ಬಿಹಾರ | |
| (ಬಿ) | ಮಹಾರಾಷ್ಟ್ರ | |
| (ಸಿ) | ಅಸ್ಸಾಂ | |
| (ಡಿ) | ಮಿಜೋರಾಂ | |
CORRECT ANSWER
(ಡಿ) ಮಿಜೋರಾಂ
| 30. | ಕಂಪ್ಯೂಟರ್ನ ಮುಖ್ಯ ಸಂಸ್ಕಾರಕ | |
| (ಎ) | ಕೇಸ್ | |
| (ಬಿ) | ಮದರ್ಬೋರ್ಡ್ | |
| (ಸಿ) | ಮಾನಿಟರ್ | |
| (ಡಿ) | ಸಿ.ಪಿ.ಯು. | |
CORRECT ANSWER
(ಡಿ) ಸಿ.ಪಿ.ಯು.
| 31. | ಈ ಕೆಳಗಿನವುಗಳಲ್ಲಿ ಯಾವುದು ಇನ್ಪುಟ್ ಸಾಧನವಾಗಿದೆ? | |
| (ಎ) | ಸ್ಪೀಕರ್ | |
| (ಬಿ) | ಮೌಸ್ | |
| (ಸಿ) | ಮಾನಿಟರ್ | |
| (ಡಿ) | ಪ್ರಿಂಟರ್ | |
CORRECT ANSWER
(ಬಿ) ಮೌಸ್
| 32. | ‘ದಂಗಲ್’ ಎಂಬ ಹಿಂದಿ ಚಿತ್ರವನ್ನು ಯಾವ ಕ್ರೀಡಾಪಟುವಿನ ಜೀವನದ ಮೇಲೆ ನಿರ್ಮಿಸಲಾಗಿದೆ? | |
| (ಎ) | ಸಾಕ್ಷಿಮಲ್ಲಿಕ್ | |
| (ಬಿ) | ಕೃಷ್ಣ ಪೂನಿಯಾ | |
| (ಸಿ) | ಜೆ.ಸಿ. ಮೇರಿಕೋಮ್ | |
| (ಡಿ) | ಗೀತಾ ಪೊಗಟ್ | |
CORRECT ANSWER
(ಡಿ) ಗೀತಾ ಪೊಗಟ್
| 33. | ಅಮಾನವೀಯ ‘‘ನಿರ್ಭಯಾ ಪ್ರಕರಣ’’ವು ಎಲ್ಲಿ ನಡೆಯಿತು? | |
| (ಎ) | ಬೆಂಗಳೂರು | |
| (ಬಿ) | ದೆಹಲಿ | |
| (ಸಿ) | ಮುಂಬಯಿ | |
| (ಡಿ) | ಕೋಲ್ಕತಾ | |
CORRECT ANSWER
(ಬಿ) ದೆಹಲಿ
| 34. | ಕೋಲ್ಕತಾ ನಗರ ಯಾವ ನದಿಯ ದಂಡೆಯ ಮೇಲಿದೆ? | |
| (ಎ) | ಹೂಗ್ಲಿ | |
| (ಬಿ) | ಬ್ರಹ್ಮಪುತ್ರ | |
| (ಸಿ) | ನರ್ಮದಾ | |
| (ಡಿ) | ಸಟ್ಲೇಜ್ | |
CORRECT ANSWER
(ಎ) ಹೂಗ್ಲಿ
| 35. | ಶಾತವಾಹನರ ರಾಜಧಾನಿ | |
| (ಎ) | ಪ್ರತಿಷ್ಠಾನಪುರ | |
| (ಬಿ) | ಪಾಟಲೀಪುತ್ರ | |
| (ಸಿ) | ಬನವಾಸಿ | |
| (ಡಿ) | ಬಾದಾಮಿ | |
CORRECT ANSWER
(ಎ) ಪ್ರತಿಷ್ಠಾನಪುರ
| 36. | ಭಾರತದಲ್ಲಿ ಅತೀ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ | |
| (ಎ) | ಕರ್ನಾಟಕ | |
| (ಬಿ) | ಕೇರಳ | |
| (ಸಿ) | ಒರಿಸ್ಸಾ | |
| (ಡಿ) | ಪಶ್ಚಿಮ ಬಂಗಾಳ | |
CORRECT ANSWER
(ಎ) ಕರ್ನಾಟಕ
| 37. | ವಿಶ್ವದಲ್ಲೇ ಅತಿ ಹೆಚ್ಚು ಹತ್ತಿ ಬೆಳೆಯುವ ದೇಶ | |
| (ಎ) | ಚೈನಾ | |
| (ಬಿ) | ಅಮೆರಿಕ | |
| (ಸಿ) | ಬ್ರೆಜಿಲ್ | |
| (ಡಿ) | ಭಾರತ | |
CORRECT ANSWER
(ಡಿ) ಭಾರತ
| 38. | ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತಿದೆ? | |
| (ಎ) | ಏಪ್ರಿಲ್ 22 | |
| (ಬಿ) | ಫೆಬ್ರವರಿ 28 | |
| (ಸಿ) | ಜೂನ್ 5 | |
| (ಡಿ) | ಸೆಪ್ಟೆಂಬರ್ 12 | |
CORRECT ANSWER
(ಬಿ) ಫೆಬ್ರವರಿ 28
| 39. | ‘ಫ್ರೆಂಚ್ ಓಪನ್ - 2017’ರ ಪುರುಷರ ಸಿಂಗಲ್ಸ್ನಲ್ಲಿ ಗೆದ್ದವರು | |
| (ಎ) | ರಫೇಲ್ ನಡಾಲ್ | |
| (ಬಿ) | ವಾವ್ರಿಂಕಾ | |
| (ಸಿ) | ರೋಜರ್ ಫೆಡರರ್ | |
| (ಡಿ) | ಆ್ಯಂಡಿ ಮುರ್ರೆ | |
CORRECT ANSWER
(ಎ) ರಫೇಲ್ ನಡಾಲ್
| 40. | ‘ಮಾವಿನ ಹಣ್ಣು’ ಹಾಗೂ ‘ಕ್ಯಾರೆಟ್’ ಈ ಕೆಳಗಿನ ಯಾವ ಅಂಶಗಳನ್ನು ಹೆಚ್ಚಾಗಿ ಹೊಂದಿದೆ? | |
| (ಎ) | ವಿಟಮಿನ್ ಸಿ | |
| (ಬಿ) | ವಿಟಮಿನ್ ಎ | |
| (ಸಿ) | ಕ್ಯಾಲ್ಸಿಯಂ | |
| (ಡಿ) | ಕಬ್ಬಿಣದ ಅಂಶ | |
CORRECT ANSWER
(ಬಿ) ವಿಟಮಿನ್ ಎ
| 41. | ವಾತಾವರಣದ ಮೇಲುಭಾಗದಲ್ಲಿರುವ ಓರೆನ್ ಪದರವು ನಮ್ಮನ್ನು ರಕ್ಷಿಸುವುದು ಯಾವ ಕಿರಣಗಳಿಂದ? | |
| (ಎ) | ಇನ್ಫ್ರಾರೆಡ್ ಕಿರಣ | |
| (ಬಿ) | ಅಲ್ಟ್ರಾ ವೈಲಟ್ ಕಿರಣ | |
| (ಸಿ) | ಕಾಸ್ಮಿಕ್ ಕಿರಣ | |
| (ಡಿ) | ಆಲ್ಟ್ರಾಸೋನಿಕ್ ಕಿರಣ | |
CORRECT ANSWER
(ಬಿ) ಅಲ್ಟ್ರಾ ವೈಲಟ್ ಕಿರಣ
| 42. | ಈ ಕೆಳಗಿನವುಗಳಲ್ಲಿ ಯಾವುದರ ಹೊರಸೂಸುವಿಕೆಯು ಜಾಗತಿಕ ತಾಪಮಾನವು ಹೆಚ್ಚಲು ಮುಖ್ಯ ಕಾರಣವೆಂದು ಹೇಳಲಾಗುತ್ತದೆ? | |
| (ಎ) | ಸಿ.ಎಫ್.ಸಿ.ಗಳು | |
| (ಬಿ) | ಜಲಜನಕ | |
| (ಸಿ) | ಸಾರಜನಕ | |
| (ಡಿ) | ಅಮೋನಿಯ | |
CORRECT ANSWER
(ಎ) ಸಿ.ಎಫ್.ಸಿ.ಗಳು
| 43. | ಮಾನವ ಶರೀರದ ಪ್ರತಿ ಜೀವಕೋಶಕ್ಕೂ ಆಮ್ಲಜನಕವನ್ನು ಸಾಗಿಸಿ ತಲುಪಿಸುವುದು. | |
| (ಎ) | ಕೆಂಪು ರಕ್ತಕಣಗಳು | |
| (ಬಿ) | ಬಿಳಿ ರಕ್ತಕಣಗಳು | |
| (ಸಿ) | ಹಾರ್ಮೋನುಗಳು | |
| (ಡಿ) | ಕಿಣ್ವಗಳು | |
CORRECT ANSWER
(ಎ) ಕೆಂಪು ರಕ್ತಕಣಗಳು
| 44. | ‘ಹುಳುಕಡ್ಡಿ’ (ಟೀನಿಯಾ ಕಾರ್ಪೋರಿಸ್) ಯಾವುದರಿಂದ ಉಂಟಾಗುತ್ತದೆ? | |
| (ಎ) | ಬ್ಯಾಕ್ಟೀರಿಯಾ | |
| (ಬಿ) | ವೈರಸ್ | |
| (ಸಿ) | ಹುಳು | |
| (ಡಿ) | ಶಿಲೀಂಧ್ರ | |
CORRECT ANSWER
(ಡಿ) ಶಿಲೀಂಧ್ರ
| 45. | ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶದ ನಡುವಿನ ಭಿನ್ನತೆಯನ್ನು ಕೆಳಕಂಡದ್ದರ ಇರುವಿಕೆಯಿಂದ ಗುರುತಿಸಲಾಗುತ್ತದೆ. | |
| (ಎ) | ಕೋಶಭಿತ್ತಿ | |
| (ಬಿ) | ಕ್ಲೋರೋಪ್ಲಾಸ್ಟ್ಗಳು | |
| (ಸಿ) | ಕೋಶಪೊರೆ | |
| (ಡಿ) | ನ್ಯೂಕ್ಲಿಯಸ್ | |
CORRECT ANSWER
(ಎ) ಕೋಶಭಿತ್ತಿ & (ಬಿ) ಕ್ಲೋರೋಪ್ಲಾಸ್ಟ್ಗಳು
| 46. | ‘ಪೊಲೀಸ್ ಧ್ವಜ ದಿನಾಚರಣೆ’ಯನ್ನು ಯಾವಾಗ ಆಚರಿಸುತ್ತಾರೆ? | |
| (ಎ) | ಜೂನ್ 5 | |
| (ಬಿ) | ಏಪ್ರಿಲ್ 2 | |
| (ಸಿ) | ಆಗಸ್ಟ್ 15 | |
| (ಡಿ) | ಜನವರಿ 26 | |
CORRECT ANSWER
(ಬಿ) ಏಪ್ರಿಲ್ 2
| 47. | ‘ಕವಿರಾಜಮಾರ್ಗ’ವನ್ನು ರಚಿಸಿದವರು? | |
| (ಎ) | ವಿದ್ಯಾನಂದಿ | |
| (ಬಿ) | ಜಿನಸೇನ | |
| (ಸಿ) | ಶ್ರೀ ವಿಜಯ | |
| (ಡಿ) | ಅಮೋಘವರ್ಷ ನೃಪತುಂಗ | |
CORRECT ANSWER
(ಸಿ) ಶ್ರೀ ವಿಜಯ & (ಡಿ) ಅಮೋಘವರ್ಷ ನೃಪತುಂಗ
| 48. | ಗೊಮ್ಮಟೇಶ್ವರ ಮೂರ್ತಿ ಈ ಕೆಳಗಿನ ಯಾವ ಸ್ಥಳದಲ್ಲಿದೆ? | |
| (ಎ) | ಕುಂದಾಪುರ | |
| (ಬಿ) | ಬಾದಾಮಿ | |
| (ಸಿ) | ಬೇಲೂರು | |
| (ಡಿ) | ಕಾರ್ಕಳ | |
CORRECT ANSWER
(ಡಿ) ಕಾರ್ಕಳ
| 49. | ‘ನಕ್ಸಲೀಯ ಚಳವಳಿ’ಯು ಈ ಕೆಳಕಂಡ ರಾಜ್ಯದ ‘ನಕ್ಸಲ್ ಬಾರಿ’ ಜಿಲ್ಲೆಯಲ್ಲಿ ಪ್ರಾರಂಭವಾಯಿತು. | |
| (ಎ) | ಆಂಧ್ರ ಪ್ರದೇಶ | |
| (ಬಿ) | ಕೇರಳ | |
| (ಸಿ) | ಜಾರ್ಖಂಡ್ | |
| (ಡಿ) | ಪಶ್ಚಿಮ ಬಂಗಾಳ | |
CORRECT ANSWER
(ಡಿ) ಪಶ್ಚಿಮ ಬಂಗಾಳ
| 50. | ‘ಪ್ಯಾನ್’ (PAN) ಎಂಬ ಸಂಕ್ಷೇಪಾಕ್ಷರಗಳ ವಿಸ್ತೃತ ರೂಪ | |
| (ಎ) | Public Account Number | |
| (ಬಿ) | Personal Account Number | |
| (ಸಿ) | Permanent Account Number | |
| (ಡಿ) | Postal Account Number | |
CORRECT ANSWER
(ಸಿ) Permanent Account Number
| 51. | ಮನುಷ್ಯನ ಶರೀರದಲ್ಲಿರುವ ಅತೀ ದೊಡ್ಡ ಗ್ರಂಥಿ ಯಾವುದು? | |
| (ಎ) | ಥೈರಾಯಿಡ್ | |
| (ಬಿ) | ಪಿಟ್ಯುಟರಿ | |
| (ಸಿ) | ಪೀನಿಯಲ್ | |
| (ಡಿ) | ಲಿವರ್ | |
CORRECT ANSWER
(ಡಿ) ಲಿವರ್
| 52. | ಭೂಕಂಪನದ ತೀವ್ರತೆಯ ವ್ಯಾಪ್ತಿಯನ್ನು ಈ ಕೆಳಕಂಡ ಅಳತೆಪಟ್ಟಿಯಿಂದ ಮಾಪನ ಮಾಡಲಾಗುತ್ತದೆ. | |
| (ಎ) | ರಿಕ್ಟರ್ | |
| (ಬಿ) | ಕೆಲ್ವಿನ್ | |
| (ಸಿ) | ಪಾಸ್ಕಲ್ | |
| (ಡಿ) | ನ್ಯೂಟನ್ | |
CORRECT ANSWER
(ಎ) ರಿಕ್ಟರ್
| 53. | ಕರ್ನಾಟಕದಲ್ಲಿ ಪೊಲೀಸ್ ರ್ಯಾಂಕ್ಗಳ ಸರಿಯಾದ ಕ್ರಮ : | |
| ಕಿರಿಯ ಶ್ರೇಣಿಯಿಂದ ಹಿರಿಯ ಶ್ರೇಣಿಯವರೆಗೆ | ||
| (ಎ) | ಎಸ್ಪಿ→ಐಜಿ→ಡಿಐಜಿ→ಎಡಿಜಿ | |
| (ಬಿ) | ಎಸ್ಪಿ→ಡಿಐಜಿ→ಐಜಿ→ಎಡಿಜಿ | |
| (ಸಿ) | ಡಿಐಜಿ→ಎಸ್ಪಿ→ಐಜಿ→ಎಡಿಜಿ | |
| (ಡಿ) | ಎಸ್ಪಿ→ಡಿಐಜಿ→ಎಡಿಜಿ→ಐಜಿ | |
CORRECT ANSWER
(ಬಿ) ಎಸ್ಪಿ→ಡಿಐಜಿ→ಐಜಿ→ಎಡಿಜಿ
| 54. | ‘ಫೆನ್ನಿ’ ಎಂಬ ಮದ್ಯವನ್ನು ಯಾವುದರಿಂದ ತಯಾರಿಸಲಾಗುತ್ತದೆ? | |
| (ಎ) | ದ್ರಾಕ್ಷಿ | |
| (ಬಿ) | ಸೇಬುಹಣ್ಣು | |
| (ಸಿ) | ಗೇರುಹಣ್ಣು | |
| (ಡಿ) | ಖರ್ಜೂರ | |
CORRECT ANSWER
(ಸಿ) ಗೇರುಹಣ್ಣು
| 55. | ಈ ಕೆಳಗಿನ ಯಾವ ರೈಲ್ವೆ ನಿಲ್ದಾಣವು ‘ಕೊಂಕಣ ರೈಲ್ವೆ’ ಗೆ ಒಳಪಟ್ಟಿದೆ? | |
| (ಎ) | ಮಂಗಳೂರು | |
| (ಬಿ) | ಹುಬ್ಬಳ್ಳಿ | |
| (ಸಿ) | ಮೈಸೂರು | |
| (ಡಿ) | ಬೀದರ್ | |
CORRECT ANSWER
(ಎ) ಮಂಗಳೂರು
| 56. | ಈ ಕೆಳಗಿನವುಗಳಲ್ಲಿ ಯಾವುದು ಕಾವೇರಿ ನದಿಯ ಉಪನದಿಯಲ್ಲ? | |
| (ಎ) | ಕೊಯ್ನಾ | |
| (ಬಿ) | ಹೇಮಾವತಿ | |
| (ಸಿ) | ಕಬಿನಿ | |
| (ಡಿ) | ಅರ್ಕಾವತಿ | |
CORRECT ANSWER
(ಎ) ಕೊಯ್ನಾ
| 57. | ದೇವಿ ಪ್ರಸಾದ್ ಶೆಟ್ಟಿ ಇವರು ಪ್ರಸಿದ್ಧ | |
| (ಎ) | ಹೃದ್ರೋಗ ತಜ್ಞ | |
| (ಬಿ) | ಅಥ್ಲೀಟ್ | |
| (ಸಿ) | ಕವಿ | |
| (ಡಿ) | ಹಾಕಿ ಆಟಗಾರ | |
CORRECT ANSWER
(ಎ) ಹೃದ್ರೋಗ ತಜ್ಞ
| 58. | ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾವ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ? | |
| (ಎ) | ಅಹ್ಮದಾಬಾದ್ | |
| (ಬಿ) | ರಾಜ್ಕೋಟ್ | |
| (ಸಿ) | ಲಕ್ನೋ | |
| (ಡಿ) | ವಾರಾಣಸಿ | |
CORRECT ANSWER
(ಡಿ) ವಾರಾಣಸಿ
| 59. | 2020ರ ಒಲಿಂಪಿಕ್ ಕ್ರೀಡೆಯು ಎಲ್ಲಿ ನಡೆಯಲಿದೆ? | |
| (ಎ) | ಟೋಕಿಯೋ | |
| (ಬಿ) | ಮೆಕ್ಸಿಕೋ | |
| (ಸಿ) | ಲಂಡನ್ | |
| (ಡಿ) | ಅಟ್ಲಾಂಟಾ | |
CORRECT ANSWER
(ಎ) ಟೋಕಿಯೋ
| 60. | 64ನೆಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದವರು | |
| (ಎ) | ಮನೋಜ್ ಬಾಜ್ಪಾಯ್ | |
| (ಬಿ) | ಅಕ್ಷಯ್ಕುಮಾರ್ | |
| (ಸಿ) | ಅಮಿತಾಬ್ ಬಚ್ಚನ್ | |
| (ಡಿ) | ರಣಬೀರ್ ಕಪೂರ್ | |
CORRECT ANSWER
(ಬಿ) ಅಕ್ಷಯ್ಕುಮಾರ್
| 61. | ಈಶಾನ್ಯ ಮಾನ್ಯೂನ್ನಿಂದ ತಮಿಳುನಾಡಿಗೆ ಸಾಮಾನ್ಯವಾಗಿ ಮಳೆಯಾಗುವುದು ಯಾವ ತಿಂಗಳಿನಲ್ಲಿ? | |
| (ಎ) | ಜೂನ್ - ಆಗಸ್ಟ್ | |
| (ಬಿ) | ಅಕ್ಟೋಬರ್ - ಡಿಸೆಂಬರ್ | |
| (ಸಿ) | ಜನವರಿ - ಮಾರ್ಚ್ | |
| (ಡಿ) | ಯಾವುದೂ ಅಲ್ಲ | |
CORRECT ANSWER
(ಬಿ) ಅಕ್ಟೋಬರ್ - ಡಿಸೆಂಬರ್
| 62. | ‘ಗೋಲ್ ಗುಂಬಜ್’ ಎಂಬುದು ಯಾರ ಸಮಾಧಿ? | |
| (ಎ) | ಮಹಮ್ಮದ್ ಆದಿಲ್ ಷಾ | |
| (ಬಿ) | ಯೂಸುಫ್ ಆದಿಲ್ ಷಾ | |
| (ಸಿ) | ಕೃಷ್ಣದೇವರಾಯ | |
| (ಡಿ) | ಸಿಕಂದರ್ ಆದಿಲ್ ಷಾ | |
CORRECT ANSWER
(ಎ) ಮಹಮ್ಮದ್ ಆದಿಲ್ ಷಾ
| 63. | ಈ ಕೆಳಗಿನ ಯಾವ ಸ್ಥಳದಲ್ಲಿ 1925ರಲ್ಲಿ ಸಿಂಡಿಕೇಟ್ ಬ್ಯಾಂಕ್ಅನ್ನು ಸ್ಥಾಪಿಸಲಾಯಿತು? | |
| (ಎ) | ನವದೆಹಲಿ | |
| (ಬಿ) | ಮುಂಬಯಿ | |
| (ಸಿ) | ಉಡುಪಿ | |
| (ಡಿ) | ಚೆನ್ನೈ | |
CORRECT ANSWER
(ಸಿ) ಉಡುಪಿ
| 64. | ಪ್ರಶಸ್ತಿ ವಿಜೇತ ಚಿತ್ರಗಳಾದ ‘ತಬರನ ಕಥೆ’, ‘ದ್ವೀಪ’ ಹಾಗೂ ‘ಗುಲಾಬಿ ಟಾಕೀಸ್’ ಚಿತ್ರಗಳ ನಿರ್ದೇಶಕರು. | |
| (ಎ) | ನಾಗತಿಹಳ್ಳಿ ಚಂದ್ರಶೇಖರ್ | |
| (ಬಿ) | ಗಿರೀಶ್ ಕಾಸರವಳ್ಳಿ | |
| (ಸಿ) | ಸುನೀಲ್ ಕುಮಾರ್ ದೇಸಾಯಿ | |
| (ಡಿ) | ಪುಟ್ಟಣ್ಣ ಕಣಗಾಲ್ | |
CORRECT ANSWER
(ಬಿ) ಗಿರೀಶ್ ಕಾಸರವಳ್ಳಿ
| 65. | ದೀಪಾ ಕರ್ಮಾಕರ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ? | |
| (ಎ) | ಅಥ್ಲೆಟಿಕ್ಸ್ | |
| (ಬಿ) | ಜಿಮ್ನಾಸ್ಟಿಕ್ಸ್ | |
| (ಸಿ) | ಬಾಕ್ಸಿಂಗ್ | |
| (ಡಿ) | ಕ್ರಿಕೆಟ್ | |
CORRECT ANSWER
(ಬಿ) ಜಿಮ್ನಾಸ್ಟಿಕ್ಸ್
| 66. | ಮ್ಯಾರಥಾನ್ ಓಟದಲ್ಲಿ ಕ್ರಮಿಸಬೇಕಾದ ದೂರವೆಷ್ಟು? | |
| (ಎ) | 26.385 ಕಿ.ಮೀ. | |
| (ಬಿ) | 42.195ಕಿ.ಮೀ. | |
| (ಸಿ) | 15.600 ಕಿ.ಮೀ. | |
| (ಡಿ) | 30 ಕಿ.ಮೀ. | |
CORRECT ANSWER
(ಬಿ) 42.195ಕಿ.ಮೀ.
| 67. | ಕರ್ನಾಟಕದಲ್ಲಿರುವ ಜಿಲ್ಲೆಗಳ ಸಂಖ್ಯೆ | |
| (ಎ) | 29 | |
| (ಬಿ) | 30 | |
| (ಸಿ) | 31 | |
| (ಡಿ) | 28 | |
CORRECT ANSWER
(ಬಿ) 30
| 68. | ಮೂಲಭೂತ ಕರ್ತವ್ಯಗಳನ್ನು ಭಾರತದ ಸಂವಿಧಾನಕ್ಕೆ ಸೇರ್ಪಡೆ ಮಾಡಲಾದ ವರ್ಷ | |
| (ಎ) | 1976 | |
| (ಬಿ) | 1978 | |
| (ಸಿ) | 1980 | |
| (ಡಿ) | 1991 | |
CORRECT ANSWER
(ಎ) 1976
| 69. | ‘ಸಿಪಾಯಿ ದಂಗೆ’ ಎಂದು ಕರೆಯಲಾಗುವ ‘ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ’ ಯಾವಾಗ ನಡೆಯಿತು? | |
| (ಎ) | 1857 | |
| (ಬಿ) | 1919 | |
| (ಸಿ) | 1942 | |
| (ಡಿ) | 1905 | |
CORRECT ANSWER
(ಎ) 1857
| 70. | ಶಿಕ್ಷಣವು ಮೂಲಭೂತ ಹಕ್ಕು ಎಂದು ತಿಳಿಸಿದ ಸಂವಿಧಾನದ ತಿದ್ದುಪಡಿ | |
| (ಎ) | 42ನೆಯ | |
| (ಬಿ) | 86ನೆಯ | |
| (ಸಿ) | 73ನೆಯ | |
| (ಡಿ) | 74ನೆಯ | |
CORRECT ANSWER
(ಬಿ) 86ನೆಯ
| 71. | ಭಾರತವು ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಿತು. ಇದರ ಅರ್ಥವೇನೆಂದರೆ ಭಾರತವು | |
| (ಎ) | ಅಮೇರಿಕಾದ ಬಣವನ್ನು ಸೇರಿತು | |
| (ಬಿ) | ಅಮೇರಿಕಾ ಮತ್ತು ರಷ್ಯಾಗಳ ಬಣಗಳಿಂದ ಸಮಾನ ಅಂತರದಲ್ಲಿ ಉಳಿಯಿತು. | |
| (ಸಿ) | ರಷ್ಯಾದ ಬಣವನ್ನು ಸೇರಿತು | |
| (ಡಿ) | ವಿಸ್ತರಣಾವಾದಿ ನೀತಿಯನ್ನು ಅನುಸರಿಸಿತು | |
CORRECT ANSWER
(ಬಿ) ಅಮೇರಿಕಾ ಮತ್ತು ರಷ್ಯಾಗಳ ಬಣಗಳಿಂದ ಸಮಾನ ಅಂತರದಲ್ಲಿ ಉಳಿಯಿತು.
| 72. | ವ್ಯಕ್ತಿಯೊಬ್ಬನು ಭವಿಷ್ಯತ್ತಿನಲ್ಲಿ ಕಾರು ಖರೀದಿಸಲು ಪ್ರತೀ ತಿಂಗಳು ನಿಯಮಿತವಾಗಿ ಉಳಿತಾಯ ಮಾಡಲು ಈ ಬ್ಯಾಂಕ್ ಖಾತೆಯನ್ನು ತೆರೆಯಬೇಕು. | |
| (ಎ) | ಚಾಲ್ತಿ ಖಾತೆ | |
| (ಬಿ) | ಉಳಿತಾಯ ಖಾತೆ | |
| (ಸಿ) | ಆವರ್ತ ಠೇವಣಿ ಖಾತೆ | |
| (ಡಿ) | ನಿಶ್ಚಿತ ಠೇವಣಿ ಖಾತೆ | |
CORRECT ANSWER
(ಸಿ) ಆವರ್ತ ಠೇವಣಿ ಖಾತೆ
| 73. | 1935ರ ಭಾರತ ಸರ್ಕಾರದ ಕಾಯ್ದೆಯು ಒಂದು ಮುಖ್ಯ ದಾಖಲೆಯಾಗಿದೆ. ಏಕೆಂದರೆ ಅದು | |
| (ಎ) | ಪ್ರಾಂತ್ಯಗಳಲ್ಲಿ ದ್ವಿ-ದಳ ಸರ್ಕಾರವನ್ನು ಜಾರಿಗೆ ತಂದಿತು | |
| (ಬಿ) | ನಿಯಂತ್ರಣ ಮಂಡಳಿಯನ್ನು ನೇಮಿಸಿತು | |
| (ಸಿ) | ಮತೀಯ ಆಧಾರದ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಸ್ಥಾಪಿಸಿತು | |
| (ಡಿ) | ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು | |
CORRECT ANSWER
(ಡಿ) ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು
| 74. | ಗೋವಾ ಪೋರ್ಚುಗೀಸರಿಂದ ವಿಮೋಚನೆಗೊಂಡ ವರ್ಷ | |
| (ಎ) | 1954 | |
| (ಬಿ) | 1963 | |
| (ಸಿ) | 1961 | |
| (ಡಿ) | 1971 | |
CORRECT ANSWER
(ಸಿ) 1961
| 75. | ಒಂದನೆಯ ಪಂಚವಾರ್ಷಿಕ ಯೋಜನೆ ಕೃಷಿ ಯೋಜನೆಯಾದರೆ ಎರಡನೆಯ ಪಂಚವಾರ್ಷಿಕ ಯೋಜನೆ | |
| (ಎ) | ಗಾಂಧಿ ಯೋಜನೆ | |
| (ಬಿ) | ಮುಂಬೈ ಯೋಜನೆ | |
| (ಸಿ) | ಮಹಾಲನೋಬಿಸ್ ಯೋಜನೆ | |
| (ಡಿ) | ಜನರ ಯೋಜನೆ | |
CORRECT ANSWER
(ಸಿ) ಮಹಾಲನೋಬಿಸ್ ಯೋಜನೆ
| 76. | ‘ಕರ್ನಾಟಕ ಪೊಲೀಸ್ ಅಕಾಡೆಮಿ’ಯು ಎಲ್ಲಿದೆ? | |
| (ಎ) | ಬೆಂಗಳೂರು | |
| (ಬಿ) | ಚನ್ನಪಟ್ಟಣ | |
| (ಸಿ) | ಕಲಬುರ್ಗಿ | |
| (ಡಿ) | ಮೈಸೂರು | |
CORRECT ANSWER
(ಡಿ) ಮೈಸೂರು
| 77. | ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ (SAARC)ಯ ಆಡಳಿತ ಕಚೇರಿ ಎಲ್ಲಿದೆ? | |
| (ಎ) | ಬ್ಯಾಂಕಾಕ್ | |
| (ಬಿ) | ಕಠ್ಮಂಡು | |
| (ಸಿ) | ಕೊಲಂಬೋ | |
| (ಡಿ) | ದೆಹಲಿ | |
CORRECT ANSWER
(ಬಿ) ಕಠ್ಮಂಡು
| 78. | ‘ಬೋನ್ಸಾಯ್’ ಎಂಬ ಶಬ್ದ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? | |
| (ಎ) | ಭತ್ತದ ಕೃಷಿ | |
| (ಬಿ) | ತೋಟಗಾರಿಕೆ | |
| (ಸಿ) | ಜಾಗತಿಕ ತಾಪಮಾನ ಏರಿಕೆ | |
| (ಡಿ) | ಮಣ್ಣಿನ ಸವಕಳಿ | |
CORRECT ANSWER
(ಬಿ) ತೋಟಗಾರಿಕೆ
| 79. | ಪ್ರಸಿದ್ಧ ನಾಟಕ ‘ತುಘಲಕ್’ ಇದರ ಕರ್ತೃ | |
| (ಎ) | ಗಿರೀಶ್ ಕಾರ್ನಾಡ್ | |
| (ಬಿ) | ಯು.ಆರ್. ಅನಂತಮೂರ್ತಿ | |
| (ಸಿ) | ಎಸ್.ಎಲ್. ಭೈರಪ್ಪ | |
| (ಡಿ) | ಪೂರ್ಣಚಂದ್ರ ತೇಜಸ್ವಿ | |
CORRECT ANSWER
(ಎ) ಗಿರೀಶ್ ಕಾರ್ನಾಡ್
| 80. | ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ? | |
| (ಎ) | ತಬಲ | |
| (ಬಿ) | ಭರತನಾಟ್ಯ | |
| (ಸಿ) | ಶಾಸ್ತ್ರೀಯ ಗಾಯನ | |
| (ಡಿ) | ಯಕ್ಷಗಾನ | |
CORRECT ANSWER
(ಡಿ) ಯಕ್ಷಗಾನ
| 81. | ವಿಕಾಸ ಗೌಡರವರಿಗೆ ಈ ಕೆಳಗಿನ ಯಾವ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು? | |
| (ಎ) | ಕುಸ್ತಿ | |
| (ಬಿ) | ಜಾವೆಲಿನ್ ಎಸೆತ | |
| (ಸಿ) | ಡಿಸ್ಕಸ್ ಎಸೆತ | |
| (ಡಿ) | ಉದ್ದ ಜಿಗಿತ | |
CORRECT ANSWER
(ಸಿ) ಡಿಸ್ಕಸ್ ಎಸೆತ
| 82. | ರಿಯೋ - ಡಿ- ಜೆನಿರೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ - 2016ರಲ್ಲಿ ಪುರುಷರ ಎತ್ತರ ಜಿಗಿತ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದವರು | |
| (ಎ) | ರಾಕೇಶ್ ಕುಮಾರ್ | |
| (ಬಿ) | ಗಿರೀಶ್ ನಾಗರಾಜೆಗೌಡ | |
| (ಸಿ) | ಮರಿಯಪ್ಪನ್ ತಂಗವೇಲು | |
| (ಡಿ) | ಅರುಣ್ ಪೂಣಚ್ಚ | |
CORRECT ANSWER
(ಸಿ) ಮರಿಯಪ್ಪನ್ ತಂಗವೇಲು
| 83. | ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಾವ ದಿನದಂದು ಆಚರಿಸಲಾಗುತ್ತದೆ? | |
| (ಎ) | ಜುಲೈ 21 | |
| (ಬಿ) | ಸೆಪ್ಟೆಂಬರ್ 5 | |
| (ಸಿ) | ಜೂನ್ 21 | |
| (ಡಿ) | ಏಪ್ರಿಲ್ 5 | |
CORRECT ANSWER
(ಸಿ) ಜೂನ್ 21
| 84. | ಈ ಕೆಳಗಿನ ಯಾವ ಆಟಗಾರ್ತಿಯು ವನಿತೆಯರ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ? | |
| (ಎ) | ರುಮೇಲಿ ಧರ್ | |
| (ಬಿ) | ಎಂ.ಎಂ. ಲ್ಯಾನಿಂಗ್ | |
| (ಸಿ) | ಮಿಥಾಲಿ ರಾಜ್ | |
| (ಡಿ) | ಎ.ಜೆ. ಬ್ಲ್ಯಾಕ್ವೆಲ್ | |
CORRECT ANSWER
(ಸಿ) ಮಿಥಾಲಿ ರಾಜ್
| 85. | ಗೌತಮ ಬುದ್ಧನು ಮರಣ ಹೊಂದಿದ ಸ್ಥಳ | |
| (ಎ) | ಲುಂಬಿನಿವನ | |
| (ಬಿ) | ರಾಜಗಿರ್ | |
| (ಸಿ) | ಕುಶಿನಗರ | |
| (ಡಿ) | ಸಾರನಾಥ | |
CORRECT ANSWER
(ಸಿ) ಕುಶಿನಗರ
| 86. | ‘ಚಿಪ್ಕೋ ಚಳವಳಿ’ಯ ಉದ್ದೇಶವು | |
| (ಎ) | ಅಣೆಕಟ್ಟುಗಳ ನಿರ್ಮಾಣವನ್ನು ತಡೆಗಟ್ಟುವುದು | |
| (ಬಿ) | ಜಲ ಸಂರಕ್ಷಣೆ | |
| (ಸಿ) | ಅರಣ್ಯ ನಾಶವನ್ನು ತಡೆಗಟ್ಟುವುದು | |
| (ಡಿ) | ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯವನ್ನು ತಡೆಗಟ್ಟುವುದು | |
CORRECT ANSWER
(ಸಿ) ಅರಣ್ಯ ನಾಶವನ್ನು ತಡೆಗಟ್ಟುವುದು
| 87. | ಜಗತ್ತಿನಲ್ಲೇ ಅತೀ ಚಿಕ್ಕದೆನಿಸಿದ ಸಾಗರ | |
| (ಎ) | ಪೆಸಿಫಿಕ್ | |
| (ಬಿ) | ಅಟ್ಲಾಂಟಿಕ್ | |
| (ಸಿ) | ಹಿಂದೂ ಮಹಾಸಾಗರ | |
| (ಡಿ) | ಆರ್ಕ್ಟಿಕ್ | |
CORRECT ANSWER
(ಡಿ) ಆರ್ಕ್ಟಿಕ್
| 88. | ನೀಲಗಿರಿ ಬೆಟ್ಟಗಳ ಅತೀ ಉನ್ನತ ಶೃಂಗದ ಹೆಸರೇನು? | |
| (ಎ) | ಆನೈಮುಡಿ | |
| (ಬಿ) | ಕೊನ್ನೂರ್ ಬೆಟ್ಟ | |
| (ಸಿ) | ದೊಡ್ಡ ಬೆಟ್ಟ | |
| (ಡಿ) | ವೆಲ್ಲಾಂಗೀರ್ | |
CORRECT ANSWER
(ಸಿ) ದೊಡ್ಡ ಬೆಟ್ಟ
| 89. | ಕೆಳಕಂಡವರಲ್ಲಿ ಯಾರು ಭಾರತದ ರಾಷ್ಟ್ರಪತಿಯವರಿಂದ ನೇಮಕಗೊಳ್ಳುವುದಿಲ್ಲ? | |
| (ಎ) | ಉಪರಾಷ್ಟ್ರಪತಿ | |
| (ಬಿ) | ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು | |
| (ಸಿ) | ರಾಜ್ಯಗಳ ರಾಜ್ಯಪಾಲರು | |
| (ಡಿ) | ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು | |
CORRECT ANSWER
(ಎ) ಉಪರಾಷ್ಟ್ರಪತಿ
| 90. | ಭಾರತದ ಪ್ರಜೆಗಳ ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ ಯಾವ ಭಾಗದಲ್ಲಿ ತಿಳಿಸಲಾಗಿದೆ? | |
| (ಎ) | ಸಂವಿಧಾನದ Iನೇ ಭಾಗದಲ್ಲಿ | |
| (ಬಿ) | ಸಂವಿಧಾನದ IVನೇ ಭಾಗದಲ್ಲಿ | |
| (ಸಿ) | ಸಂವಿಧಾನದ VIIನೇ ಅನುಸೂಚಿಯಲ್ಲಿ | |
| (ಡಿ) | ಸಂವಿಧಾನದ IV ಎ ಭಾಗದಲ್ಲಿ | |
CORRECT ANSWER
(ಡಿ) ಸಂವಿಧಾನದ IV ಎ ಭಾಗದಲ್ಲಿ
| 91. | ಈ ಕೆಳಗಿನವುಗಳಲ್ಲಿ ಯಾವುದು ಮಿಶ್ರ ಲೋಹವಲ್ಲ? | |
| (ಎ) | ಸತು | |
| (ಬಿ) | ಹಿತ್ತಾಳೆ | |
| (ಸಿ) | ಉಕ್ಕು | |
| (ಡಿ) | ಕಂಚು | |
CORRECT ANSWER
(ಎ) ಸತು
| 92. | ಹಾಲು ಮೊಸರಾಗುವುದು ಯಾವುದಕ್ಕೆ ಉದಾಹರಣೆ? | |
| (ಎ) | ಪ್ರತಿಲೋಮನ | |
| (ಬಿ) | ಹೈಡ್ರಾಲಿಸಿಸ್ | |
| (ಸಿ) | ವಿಕೃತಗೊಳ್ಳುವಿಕೆ | |
| (ಡಿ) | ಗರಣೆಕಟ್ಟುವಿಕೆ | |
CORRECT ANSWER
(ಸಿ) ವಿಕೃತಗೊಳ್ಳುವಿಕೆ
| 93. | ಭಾರತೀಯ ಸಂವಿಧಾನದ ಪ್ರಕಾರ ಈ ಕೆಳಗಿನ ಯಾವ ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ? | |
| (ಎ) | ಸಮಾನತೆಯ ಹಕ್ಕು | |
| (ಬಿ) | ವಾಕ್ ಸ್ವಾತಂತ್ರ್ಯದ ಹಕ್ಕು | |
| (ಸಿ) | ಧರ್ಮವನ್ನು ಬದಲಾಯಿಸಿಕೊಳ್ಳುವ ಹಕ್ಕು | |
| (ಡಿ) | ಕೆಲಸ ಮಾಡುವ ಹಕ್ಕು | |
CORRECT ANSWER
(ಡಿ) ಕೆಲಸ ಮಾಡುವ ಹಕ್ಕು
| 94. | ‘ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಎಂದು ಘೋಷಿಸಿದವರು. | |
| (ಎ) | ಲಾಲಾ ಲಜಪತ್ ರಾಯ್ | |
| (ಬಿ) | ಮಹಾತ್ಮ ಗಾಂಧಿ | |
| (ಸಿ) | ಬಾಲಗಂಗಾಧರ ತಿಲಕ್ | |
| (ಡಿ) | ಸರ್ದಾರ್ ವಲ್ಲಭಭಾಯಿ ಪಟೇಲ್ | |
CORRECT ANSWER
(ಸಿ) ಬಾಲಗಂಗಾಧರ ತಿಲಕ್
| 95. | ಮೈಸೂರು ರಾಜ್ಯವು ಯಾವಾಗ ‘ಕರ್ನಾಟಕ’ ಎಂದು ಪುನರ್ ನಾಮಕರಣಗೊಂಡಿತು? | |
| (ಎ) | ನವೆಂಬರ್ 1, 1973 | |
| (ಬಿ) | ನವೆಂಬರ್ 1, 1956 | |
| (ಸಿ) | ಆಗಸ್ಟ್ 15, 1947 | |
| (ಡಿ) | ನವೆಂಬರ್ 1, 1950 | |
CORRECT ANSWER
(ಎ) ನವೆಂಬರ್ 1, 1973
| 96. | ‘ಎಫ್.ಐ.ಆರ್’ (FIR) ಇದರ ವಿಸ್ತೃತ ರೂಪ ದಂಡ ಪ್ರಕ್ರಿಯಾ ಸಂಹಿತೆ, 1973ರಲ್ಲಿ ನೀಡಿರುವಂತೆ | |
| (ಎ) | First Information Report | |
| (ಬಿ) | First Investigation Report | |
| (ಸಿ) | First Intimation Report | |
| (ಡಿ) | First Interrogation Register | |
CORRECT ANSWER
(ಎ) First Information Report
| 97. | ಕರ್ನಾಟಕ ರಾಜ್ಯದಲ್ಲಿ ಎಷ್ಟು ಪೊಲೀಸ್ ವಲಯಗಳಿವೆ? | |
| (ಎ) | 5 | |
| (ಬಿ) | 6 | |
| (ಸಿ) | 7 | |
| (ಡಿ) | 8 | |
CORRECT ANSWER
(ಸಿ) 7
| 98. | ಐಪಿಸಿ (ಭಾರತೀಯ ದಂಡ ಸಂಹಿತೆ) ಕಲಂ 376, ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? | |
| (ಎ) | ಲೈಂಗಿಕ ಕಿರುಕುಳ | |
| (ಬಿ) | ಕೊಲೆ | |
| (ಸಿ) | ಅತ್ಯಾಚಾರ | |
| (ಡಿ) | ಅಪಹರಣ | |
CORRECT ANSWER
(ಸಿ) ಅತ್ಯಾಚಾರ
| 99. | ಒಂದು ನಿರ್ದಿಷ್ಟ ಸಮಯದಲ್ಲಿ ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ ಆದ ಹೆಚ್ಚಳವನ್ನು ____________ ಎಂದು ಕರೆಯುತ್ತಾರೆ. | |
| (ಎ) | ಪಾವತಿಗಳ ಸಮತೋಲನ | |
| (ಬಿ) | ಸವಕಳಿ | |
| (ಸಿ) | ಜಿ.ಡಿ.ಪಿ. | |
| (ಡಿ) | ಹಣದುಬ್ಬರ | |
CORRECT ANSWER
(ಡಿ) ಹಣದುಬ್ಬರ
| 100. | ಪ್ರಸಿದ್ಧ ಬೀಚ್ ಎನಿಸಿರುವ ‘ಓಂ ಬೀಚ್’ ಎಲ್ಲಿದೆ? | |
| (ಎ) | ಮಂಗಳೂರು | |
| (ಬಿ) | ಉಡುಪಿ | |
| (ಸಿ) | ಮುರ್ಡೇಶ್ವರ | |
| (ಡಿ) | ಗೋಕರ್ಣ | |
CORRECT ANSWER
(ಡಿ) ಗೋಕರ್ಣ
0 Comments